ಪ್ರಸಿದ್ಧ ಭಜನೆಗಾರ, ನಾಟಕ ಕಲಾವಿದ ಜನಾರ್ಧನ ರಾವ್ ನಿಧನ
ಉಪ್ಪಳ: ಸುಬ್ಬಯ್ಯಕಟ್ಟೆ ಸಮೀಪದ ನೀರ್ಪಂತಿ ನಿವಾಸಿ ಬೋವಿಕ್ಕಾನ ಬಳಿ ವಾಸಿಸುತ್ತಿದ್ದ ಪ್ರಸಿದ್ದ ಭಜನೆಗಾರ ಜನಾರ್ಧನ ರಾವ್ (79) ನಿಧನರಾ ದರು. ಉಸಿರಾಟ ಸಂಬAಧಿ ಖಾಯಿಲೆಯಿಂದ ಬಳಲುತ್ತಿದ್ದ ಇವರು ಮಂಗಳೂರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದರು. ಸುಬ್ಬಯಕಟ್ಟೆಯಲ್ಲಿ ತರಂಗಿಣಿ ಫ್ರೆಂಡ್ಸ್ ಕ್ಲಬ್‌ನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮೀ ಪದ ಎಲ್ಲಾ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಜನೆ ಸಂಕೀರ್ತನೆಯಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗಳಿಸಿ ದ್ದರು. ಹವ್ಯಾಸಿ ನಾಟಕ ಕಲಾವಿ ದರಾಗಿದ್ದ ಇವರು, ಸುಬ್ಬಯ್ಯಕಟ್ಟೆಯಲ್ಲಿ ಸುಮಾರು 20 ವರ್ಷಗಳ ಕಾಲ ರೇಷನ್ ವ್ಯಾಪಾರಿಯಾಗಿದ್ದರು. ಕೆಲವು ವರ್ಷಗಳ ಕಾಲ ಬೋವಿಕ್ಕಾನ ಪರಿಸರದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಪ್ರಭಾವತಿ, ಮಕ್ಕಳಾದ ಕಾರ್ತಿಕ್ ರಾವ್, ಕೌಶಿಕ್ ರಾವ್, ಸಾತ್ವಿಕ, ಸಹೋದರರಾದ ಅಚ್ಚುತ್ ರಾವ್ [ನಿವೃತ್ತ ಪೋಸ್ಟ್ ಮಾಸ್ಟರ್], ಚಂದ್ರಶೇಖರ ರಾವ್, ಸಹೋದರಿಯರಾದ ಗಿರಿಜಾ, ಶಾರದಾ, ಶಾಂಭವಿ, ವಿಜಯಲಕ್ಷಿ÷್ಮÃ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.