ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ: ಎನ್.ಐ.ಎ ತಂಡ ಕಾಸರಗೋಡಿಗೆ ಆರೋಪಿಯ ಗುರುತು ಹಚ್ಚುವ ಪರೇಡ್ ಮುಂದಿನವಾರ

ಕಾಸರಗೋಡು: ಕೋಮು ದ್ವೇಷದಿಂದ ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್‌ರ ಕೈ ತುಂಡರಿಸಿದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಸರಗೋಡಿಗೆ ವಿಸ್ತರಿಸಿದೆ.  ಇದರಂತೆ ಎನ್‌ಐಎ ಅಧಿಕಾರಿಗಳು    ಕಾಸರಗೋಡಿಗೆ ಆಗಮಿಸಿದ್ದಾರೆ. 

 ಪ್ರಾಧ್ಯಾಪಕನ  ಕೈ ತುಂಡರಿಸಿದ ಪ್ರಕರಣದಲ್ಲಿ  ಸೆರೆಗೀಡಾದ   ಒಂದನೇ ಆರೋಪಿ ಹಾಗೂ ಅದರ ಪ್ರಧಾನ ಸೂತ್ರಧಾರನೂ ಆಗಿರುವ ನಿಷೇಧಿತ ಪೋಪುಲರ್ ಫ್ರಂಟ್  ಕಾರ್ಯಕರ್ತ ಎರ್ನಾಕುಳಂ ಪೆರುಂಬಾವೂರು ಅಶವನ್ನೂರು ನ್ಯುಲೇಲಿ ನಿವಾಸಿ  ಮುಟ್ಟಶ್ಶೇರಿ  ಸವಾದ್ (೩೮) ಎಂಬಾತನ ಕುರಿತಾಗಿ ತನಿಖೆಯ ಭಾಗವಾಗಿ ಎನ್‌ಐಎ ತಂಡ ಕಾಸರಗೋಡಿಗೆ ತಲುಪಿದೆ.   ಎನ್‌ಐಎ ತಂಡ ಇಂದು ಮಂಜೇಶ್ವರಕ್ಕೆ ತೆರಳಿ  ಸವಾದ್‌ನ ಪತ್ನಿ ಮನೆಯವರನ್ನು  ಭೇಟಿಮಾಡಿ ಅವರಿಂದ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.  ಅದೇ ರೀತಿ ಸವಾದ್‌ನ ಮದುವೆ ಸಂಬಂಧ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಲಿದೆಯೆಂದೂ ಹೇಳಲಾಗುತ್ತಿದೆ.    ಸವಾದ್‌ನನ್ನು ಆತನ ಪತ್ನಿ ಮನೆಯವರಿಗೆ ಮೊದಲು ಪರಿಚಯಗೊಂಡ ಸ್ಥಳಕ್ಕೂ ತೆರಳಿ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಯಿದೆಯೆಂದು ಹೇಳಲಾಗುತ್ತಿದೆ. 

ಇದೇ ವೇಳೆ ಸವಾದ್‌ನನ್ನು ಗುರುತುಹಚ್ಚುವ ಪರೇಡ್‌ಗೊಳ ಪಡಿಸುವಂತೆ ಕೋರಿ ಎನ್‌ಐಎಯ ಕೊಚ್ಚಿಯಲ್ಲಿರುವ  ವಿಶೇಷ ನ್ಯಾಯಾಲ ಯವಾದ  ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅದರಂತೆ ಆರೋ ಪಿಯನ್ನು ಮುಂದಿನವಾರ ಗುರುತುಹಚ್ಚುವ ಪರೇಡ್‌ಗೊ ಪಡಿಸಲಾಗುವುದು. ಪ್ರಾಧ್ಯಾಪಕನ ಕೈ ತುಂಡರಿಸಿದ ಬಳಿಕ ಕಣ್ಣೂರು ಮತ್ತು ಕಾಸರಗೋಡು  ಮೊದಲಾಡೆಗಳಲ್ಲಾಗಿ  ಶಾನವಾಸ್ ಎಂದು ಹೆಸರು ಬದಲಿಸಿ ಕಳೆದ ೧೩ ವರ್ಷಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದ ಸವಾದ್‌ನನ್ನು ಕಣ್ಣೂರು ಮಟ್ಟನ್ನೂರಿನ ಪೆರಿಯಾರತ್ ಬೇರತ್‌ನಲ್ಲಿರುವ ಕ್ವಾರ್ಟಸ್‌ವೊಂದರಿಂದ ಮೊನ್ನೆ ಮುಂಜಾನೆ ಎನ್‌ಐಎ ಬಂಧಿಸಿದೆ.  ಮಾತ್ರವಲ್ಲ ಆತನ ಎರಡು ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಮತ್ತಿತರ ಹಲವು ದಾಖಲು ಪತ್ರಗಳನ್ನು ವಶಪಡಿಸಿಕೊಂಡಿತ್ತು.

ತಲೆಮರೆಸಿಕೊಂಡಿದ್ದ ಸವಾದ್ ನ ಕುರಿತಾದ ಮಾಹಿತಿ ನೀಡುವವರಿಗೆ ಎನ್‌ಐಎ ೧೦ ಲಕ್ಷ ರೂ. ಪಾರಿತೋಷಕ ಘೋಷಿಸಿತ್ತು. ಅದನ್ನು ಗಮನಿಸಿದ ಯಾರೋ ಸವಾದ್ ಮಟ್ಟನ್ನೂರಿನಲ್ಲಿರುವ ಬಗ್ಗೆ ಎನ್‌ಐಎಗೆ ಗುಪ್ತ ಮಾಹಿತಿ ನೀಡಿದ್ದರು. ಮಾತ್ರವಲ್ಲ ಹೀಗೆ ಮಾಹಿತಿ ನೀಡಿದ ವ್ಯಕ್ತಿಯ ಪೂರ್ಣ ಭದ್ರತೆಯನ್ನು ಖಾತರಿ ಪಡಿಸಿಕೊಂಡೇ ಕಳೆದ ಮೂರು ತಿಂಗಳಿಂದ ಎನ್‌ಐಎ ಸವಾದ್‌ನನ್ನು ಸೆರೆಹಿಡಿಯುವ ಬಲೆಬೀಸಿತ್ತು. ಅದರಂತೆ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಆತನನ್ನು ಮಟ್ಟನ್ನೂರಿನಿಂದ ಬಂಧಿಸುವಲ್ಲಿ ಸಫಲವಾಗಿದೆ. ಬಳಿಕ ಆತನನ್ನು ಕೊಚ್ಚಿಗೆ ಸಾಗಿಸಿ ಈತಿಂಗಳ ೨೪ರ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page