ಪ್ರಿಯಾಂಕಾ ಗಾಂಧಿ ಇಂದು ಕೇರಳಕ್ಕೆ
ತೃಶೂರು: ಯುಡಿಎಫ್ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಕೇರಳಕ್ಕೆ ಆಗಮಿಸಲಿದ್ದಾರೆ.
ಇಂದು ಮಧ್ಯಾಹ್ನ ವೇಳೆ ವಿಶೇಷ ವಿಮಾನದಲ್ಲಿ ಕೊಚ್ಚಿಗೆ ತಲುಪುವ ಪ್ರಿಯಾಂಕಾ ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಚಾಲಕ್ಕುಡಿ ಮಂಡಲದ ಚೇರಮಾನ್ ಪರಂಬ್ ಮೈದಾನಕ್ಕೆ ತಲುಪಿ ಸಾರ್ವಜನಿಕ ಸಮ್ಮೇಳನದಲ್ಲಿ ಮಾತನಾಡುವರು. ಅಪರಾಹ್ನ ೨.೩೦ಕ್ಕೆ ಪತ್ತನಂತಿಟ್ಟದಲ್ಲಿ ಸಾರ್ವಜನಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಸಂಜೆ ೪ಕ್ಕೆ ತಿರುವನಂತಪುರದಲ್ಲಿ ರೋಡ್ ಶೋದಲ್ಲಿ ಪಾಲ್ಗೊಂಡು, ೫.೨೦ಕ್ಕೆ ದಿಲ್ಲಿಗೆ ಮರಳುವರು.