ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲೂಕು ಮಹಾಸಭೆ

ಕಾಸರಗೋಡು:  ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲೂಕು ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾಸರಗೋಡು ವ್ಯಾಪಾರ ಭವನದಲ್ಲಿ ಜರಗಿತು. ಪ್ರಧಾನ ಕಾರ್ಯದರ್ಶಿ ಸಿ.ಎ. ಮೊಹಮ್ಮದ್ ಕುಂಞಿ ವರದಿ ಮಂಡಿಸಿದರು. ಜಿಲ್ಲಾಧ್ಯಕ್ಷ ಕೆ. ಗಿರೀಶ್ ಸಭೆ ಉದ್ಘಾಟಿಸಿದರು. ಅಧ್ಯಕ್ಷ ಎ.ಎಂ. ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ. ಲಕ್ಷ್ಮಣನ್ ಚುನಾವಣಾಧಿಕಾರಿಯಾಗಿದ್ದರು. ತಾಲೂಕು ಅಧ್ಯಕ್ಷರಾಗಿ ಬಿ.ಸಿ. ಮಧುಸೂದನನ್, ಉಪಾಧ್ಯಕ್ಷರಾಗಿ ಕೆ.ಎನ್. ಬಾಲಕೃಷ್ಣನ್, ಜನಾರ್ದನನ್ ಜೈಶಾಲ್, ಕಾರ್ಯದರ್ಶಿಯಾಗಿ ಸಿ.ಎ. ಮೊಹಮ್ಮದ್ ಕುಂಞಿ, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಬಶೀರ್, ಅಬೂಬಕ್ಕರ್ ಪಟ್ಲ,  ಕೋಶಾಧಿಕಾರಿಯಾಗಿ ಶರತ್ ಆಯ್ಕೆಯಾದರು. ಎಸ್. ರಾಧಾಕೃಷ್ಣನ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

You cannot copy content of this page