ಫೆನ್ಸಿಂಗ್ನಲ್ಲಿ ಹೊಸ ಭರವಸೆಯೊಂದಿಗೆ ಕಾಸರಗೋಡು ತಾರೆಯರು
ಕಾಸರಗೋಡು: ತಿರುವನಂv Àಪುರಂನ ಪೆರಿಂಗಮಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ೨೫ನೇ ಕೇರಳ ಸ್ಟೇಟ್ ಸಬ್ ಜೂನಿ ಯರ್ ಫೆನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಾಸರಗೋಡು ತೃತೀಯ ಸ್ಥಾನ ಪಡೆದುಕೊಂಡಿದೆ. ರೈಫನಾತ್ ಅಮಾನ, ಅನ್ಯೆತ ನಂಬಿಯಾರ್ ಮತ್ತು ಮುಹಮ್ಮದ್ ರೈಹಾನ್ ಎಂಬೀ ಫೆನ್ಸಿಂಗ್ ತಾರೆಯರು ಮಾರ್ಚ್ ೨೫ ರಿಂದ ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪ್ಶನ್ಶಿಪ್ಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಬಾಲಕಿಯರ ಗ್ರೂಪ್ ಸ್ಪರ್ಧೆಯಲ್ಲಿ ರೈಫನಾತ್ ಅಮಾನ, ಅನ್ಯೆತ ನಂಬಿಯಾರ್ ಮತ್ತು ಡಿ.ಅನುಷ್ಕಾ ಎಂಬುವರು ಚಿನ್ನದ ಪದಕ ಗೆದ್ದರೆ, ವೈಯಕ್ತಿಕ ಸ್ಪರ್ಧೆಯಲ್ಲಿ ರೈಫನಾತ್ ಅಮಾನ ಬೆಳ್ಳಿ ಪದಕ ಮತ್ತು ಅನ್ಯೆತ ನಂಬಿಯಾರ್ ಕಂಚಿನ ಪದಕ ಪಡೆದರು. ಮುಹಮ್ಮದ್ ರೈಹಾನ್, ಸುಜಯ್ ಕೃಷ್ಣ ಮತ್ತು ಟಿ.ಎಂ. ಮಹಮ್ಮದ್ ಹನಾನ್ ಎಂಬಿವರು ಸೇರಿದಂತೆ ಗಂಡು ಮಕ್ಕಳ ಫೆನ್ಸಿಂಗ್ ಸಾಬರ್ ಗ್ರೂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಮತ್ತು ಮಕ್ಕಳ ಫೆನ್ಸಿಂಗ್ ಫಾಯಿಲ್ ಗ್ರೂಪ್ ಸ್ಪರ್ಧೆಯಲ್ಲಿ ತನ್ವೀರ್ ಅಲಿ, ಮಹಮ್ಮದ್ ಸುಲ್ತಾನ್, ಮಹಮ್ಮದ್ ಶುಜಾ ಕಂಚಿನ ಪದಕ ಗೆದ್ದು ಸಬ್ ಜೂನಿಯರ್ ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ ಅಧೀನದಲ್ಲಿ ಖೇಲೋ ಇಂಡಿಯಾ ಡೇ ಬೋರ್ಡಿಂಗ್ ಸ್ಕೀಮ್ ಪ್ರಕಾರ ೨೦೨೨ ರಲ್ಲಿ ಜಿಲ್ಲಾ ಕ್ರೀಡಾ ಅಕಾಡೆಮಿ ಕೇಂದ್ರವಾಗಿ ಫೆನ್ಸಿಂಗ್ ಟ್ರೈನಿಂಗ್ ಪ್ರಾರಂಭ ವಾಗಿದೆ. ಮರಿಯಾ ಟಾಮ್ ಅವರು ಫೆನ್ಸಿಂಗ್ ತರಬೇತು ದಾರರಾಗಿದ್ದಾರೆ. ಈ ಸಾಧನೆಗೆ ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಕ್ರೀಡಾ ಪಟುಗಳನ್ನು ಅಭಿನಂದಿಸಿದರು.