ಫ್ಯಾಕ್ಟರಿಯಲ್ಲಿ ಕಾರ್ಮಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಹೊಸದುರ್ಗ: ಪ್ಲೈವುಡ್ ಪ್ಯಾಕ್ಟರಿಯ ಕಾರ್ಮಿಕನಾದ ಯುವ ಕನ ಮೃತದೇಹ ಪಾಯಿಖಾನೆಯಲ್ಲಿ ನಿಗೂಢ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಕ್ಕಾಡ್ ವನ್ನೋಳದ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕಾರ್ಮಿಕನಾದ ಕೌಶಿಕ್ ಬಾಗ್ಡಿ (24) ಮೃತಪಟ್ಟ ಯುವಕ. ಪಶ್ಚಿಮ ಬಂಗಾಳ ಪನ್ನೂರು ಯ ಬಾರ್ಬಂ ನಿವಾಸಿಯಾಗಿದ್ದಾರೆ.
ಎರಡು ವರ್ಷದಿಂದ ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ವರೆಗೆ ಕೌಶಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಅದರ ಬಳಿಕ ಪಾಯಿಖಾನೆಗೆ ತೆರಳಿ ಸಿಂಟೆಕ್ಸ್‌ನ ಬಾಗಿಲಿನ ಪ್ರೇಮ್‌ಗೆ ಪ್ಲಾಸ್ಟಿಕ್ ಹಗ್ಗದಲ್ಲಿ ನೇಣು ಬಿಗಿದಿದ್ದು, ಜೊತೆಗೆ ಕೆಲಸ ಮಾಡುವವರು ಸೇರಿ ಆಸ್ಪತ್ರೆಗೆ ತಲುಪಿಸಿಲಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಪೋಸ್ಟ್‌ಮಾರ್ಟ ಮ್‌ಗಾಗಿ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಇದೇ ವೇಳೆ ಕೌಶಿಕ್‌ನ ಫೋನ್‌ಗೆ ಕೊನೆಯದಾಗಿ ಕರೆಯೊಂದು ಬಂದಿದ್ದು, ಇದು ಆತ್ಮಹತ್ಯೆಗೆ ಕಾರಣವಾಗಿ ರಬೇಕೆಂದು ಶಂಕಿಸಲಾಗಿದೆ. ಪ್ರಸ್ತುತ ಕರೆಯ ಬಳಿಕ ಕೌಶಿಕ್ ಪ್ರಿಯತಮೆಯಾದ ಯುವತಿಗೆ ಕರೆ ಮಾಡಿರುವುದಾಗಿಯೂ ಹೇಳಲಾಗುತ್ತಿದೆ. ಸೈಬರ್ ಸೆಲ್‌ನ ಸಹಾ ಯದೊಂದಿಗೆ ತನಿಖೆ ಆರಂಭಿಸಲಾಗಿದೆ.