ಫ್ಲ್ಯಾಟ್ನ ಮಲಿನ ಜಲ ರಸ್ತೆಗೆ: ದುರ್ವಾಸನೆ ಅಸಹನೀಯ
ಉಪ್ಪಳ: ಕೈಕಂಬ -ಬಾಯಾರು ರಸ್ತೆ ಪರಿಸರದಲ್ಲಿನ ಫ್ಲ್ಯಾಟ್ನಿಂದ ಮಲಿನ ಜಲ ಕೈಕಂಬ ಪೇಟೆಗೆ ಹರಿದು ದುರ್ವಾಸನೆ ಅಸಹನೀಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೈಕಂಬ ಪೇಟೆಯಿಂದ ೫೦ ಮೀಟರ್ ದೂರ ಬಾಯಾರು ರಸ್ತೆ ಪರಿಸರದಲ್ಲಿರುವ ಫ್ಲ್ಯಾಟ್ನಿಂದ ಮಲಿನ ಜಲ ರಸ್ತೆ ಮೂಲಕ ಹರಿದು ಕೈಕಂಬಕ್ಕೆ ತಲುಪುತ್ತಿದೆ ಎಂದು ದೂರಲಾಗಿದೆ. ರಸ್ತೆಯಲ್ಲಿ ಸಂಗ್ರಹಗೊಂಡಿರುವ ಮಲಿನ ಜಲದಿಂದಾಗಿ ಈ ಪರಿಸರದಲ್ಲಿ ಪ್ರಯಾಣಿಸುವವರು, ವ್ಯಾಪಾರಿಗಳು ಸಮಸ್ಯೆಗೀಡಾಗಿದ್ದಾರೆ.
ಪದೇ ಪದೇ ಮಲಿನಜಲ ರಸ್ತೆಗೆ ಹರಿಯುತ್ತಿದ್ದರೂ ಫ್ಲ್ಯಾಟ್ನಲ್ಲಿ ವಾಸವಾಗಿರುವವರು ಅಥವಾ ಸಂಬಂಧಪಟ್ಟವರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.