ಬಂಗೇರಣ್ಣ ತರವಾಡು ಧರ್ಮನೇಮ 11ರಿಂದ
ಕುಂಬಳೆ: ಮಾವಿನಕಟ್ಟೆ ಬಂಗೇರಣ್ಣ ಕುಟುಂಬ ತರವಾಡು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಧರ್ಮನೇಮ ಈ ತಿಂಗಳ 11,12ರಂದು ವಿವಿಧ ಕಾರ್ಯಕ್ರ ಮಗಳೊಂದಿಗೆ ನಡೆಯಲಿದೆ.
ಇಂದು ಗೊನೆ ಮುಹೂರ್ತ ನಡೆದಿದ್ದು, 11ರಂದು ಬೆಳಿಗ್ಗೆ 7.30ಕ್ಕೆ ಭಜನೆ, 8.30ಕ್ಕೆ ಗಣಪತಿಹೋಮ, 10ರಿಂದ ತಂಬಿಲ, 12 ಗಂಟೆಗೆ ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆ, 1ರಿಂದ ಅನ್ನಸಂತರ್ಪಣೆ, ಸಂಜೆ 4ಗಕ್ಕೆ ಗುಳಿಗನ ಕೋಲ, ರಾತ್ರಿ 7ಕ್ಕೆ ಶ್ರೀ ಕುಪ್ಪೆಪಂಜುರ್ಲಿ, ಕಲ್ಲುರ್ಟಿ ದೈವಗಳ, ಧೂಮಾವತಿ ದೈವದ ಭಂಡಾರ ತೆಗೆಯುವುದು, 9ರಿಂದ ಅನ್ನಸಂತರ್ಪಣೆ, 10ರಿಂದ ಕೊರತಿ ದೈವದ ಕೋಲ, 11ರಿಂದ ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ ನಡೆಯಲಿದೆ. 11ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಧೂಮಾವತಿ ದೈವದ ಕೋಲ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6ಕ್ಕೆ ರಾಹುಗುಳಿಗನ ಕೋಲ ನಡೆಯಲಿದೆ.