ಬಂಗ್ರಮಂಜೇಶ್ವರ ಕ್ಷೇತ್ರಕ್ಕೆ ಗುರು ಶಿವ ಸುಜ್ಞಾನ ತೀರ್ಥ ಸ್ವಾಮೀಜಿ ಭೇಟಿ
ಮಂಜೇಶ್ವರ :ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಜಗದ್ಗುರು ಅನಂತ ವಿಭೂಷಿತ ಶ್ರೀ ಗುರು ಶಿವ ಸುಜ್ಞಾನ ತೀರ್ಥ ಸ್ವಾಮೀಜಿ ಅರೆಮಾದನಹಳ್ಳಿ ಚಿಕ್ಕರಕಲಗೂಡು ಹಾಸನ ಜಿಲ್ಲೆ ಇವರು ನಿನ್ನೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಯದುನಂದನ ಆಚಾರ್ಯ ಮಂಜೇಶ್ವರ, ಪ್ರಾಂತ್ಯ ಅಧ್ಯಕ್ಷ ಅನಂತ ಆಚಾರ್ಯ ಮಂಜೇಶ್ವರ, ಪ್ರಾಂತ್ಯ ಮೊಕ್ತೇಸರ ಜಯಂತ ಆಚಾರ್ಯ, ಕಾರ್ಯದರ್ಶಿ ಭಾಸ್ಕರ್ ಆಚಾರ್ಯ, ನಾಗರಾಜ ಆಚಾರ್ಯ ಕೋಶಾಧಿಕಾರಿ ಸತ್ಯಮೂರ್ತಿ ಆಚಾರ್ಯ, ಮಹಿಳಾ ಮಂಡಳಿ ಓಜ ಸಾಹಿತ್ಯಕೂಟ ಹಾಗೂ ವೈದಿಕರು, ಅರ್ಚಕರು ಮತ್ತು ಭಕ್ತರು ಉಪಸ್ಥಿತರಿದ್ದರು .