ಬಂಗ್ರಮಂಜೇಶ್ವರ ರಸ್ತೆಯಲ್ಲಿ ಬೀಡುಬಿಟ್ಟಿರುವ ಬೀದಿ ನಾಯಿಗಳ ಹಿಂಡು: ಪಾದಚಾರಿಗಳಿಗೆ ಆತಂಕ
ಮಂಜೇಶ್ವರ: ಬಂಗ್ರಮAಜೇಶ್ವರ ಪ್ರದೇಶದ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಬೀದಿ ನಾಯಿಗಳ ಹಿಂಡು ಬೀಡುಬಿಟ್ಟಿದ್ದು, ಶಾಲಾ ಮಕ್ಕಳ ಸಹಿತ ಸ್ಥಳೀಯರ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿರುವುದಾಗಿ ದೂರಲಾಗಿದೆ. ಬಂಗ್ರಮAಜೇಶ್ವರ ಸೇತುವೆಯ ರಸ್ತೆಯಲ್ಲಿ ಸುಮಾರು 10ರಷ್ಟು ಬೀದಿ ನಾಯಿಗಳು ಪರಸ್ಪರ ಕಚ್ಚಾಡುತ್ತಿರುವುದು, ಆಡುಗಳನ್ನು,ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟುತ್ತಿದೆ. ನಾಯಿಯ ಕಾಟದಿಂದ ಬೆಳಿಗ್ಗೆ ಮದ್ರಸ ಹಾಗೂ ಶಾಲೆಗಳಿಗೆ ತೆರಳುವ ಮಕ್ಕಳು ಭಯಭೀತರಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.