ಬಂಟರ ಸಂಘದ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ
ಮಧೂರು: ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಡೆಪ್ಯುಟಿ ಕಲೆಕ್ಟರ್ ಗೋಪಾಲಕೃಷ್ಣ ಶೆಟ್ಟಿಯವರನ್ನು ಬೆಳ್ಳೂರು ಮಹಿಳಾ ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು. ಈ ವೇಳೆ ಮಹಿಳಾಸಂಘದ ಪದಾಧಿಕಾರಿಗಳಾದ ಡಾ. ವಿದ್ಯಾ ಮೋಹನ್‌ದಾಸ್ ರೈ, ಜಯಲಕ್ಷ್ಮಿ ಶೆಟ್ಟಿ ಕಳ್ವಾಜೆ, ಶ್ಯಾಮಲಾ ಎಸ್. ರೈ, ಶ್ರೀಲತಾ ರೈ ಉಪಸ್ಥಿತರಿದ್ದರು. ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು, ಚಿತ್ರಲೇಖ ಎಸ್. ಆಳ್ವ, ಸುನಿಲ್‌ಚಂದ್ರ ಆಳ್ವ, ಉದಯ ಕುಮಾರ್ ರೈ, ರೇವತಿ ಯು.ಕೆ. ರೈ ಭಾಗವಹಿಸಿದರು.