ಬಂಟರ ಸಂಘ ಬದಿಯಡ್ಕ, ಮಧೂರು ಘಟಕದಿಂದ ಆಟಿದ ಕೂಟ, ತಿಂಡಿ ತಿನಸುಗಳ ಪ್ರದರ್ಶನ
ಬದಿಯಡ್ಕ: ನಾಡಿನ ಅಭಿವೃದ್ಧಿಗೆ ಬಂಟ ಸಮಾಜದ ಕೊಡುಗೆ ಅನನ್ಯ ವಾಗಿದೆ. ಸಮಾಜದ ಬಂಧುಗಳು ಒಗ್ಗಟ್ಟಾಗಿ ಸಂಘಟನೆಯನ್ನು ಬಲಪಡಿ ಸಬೇಕು. ಮಹಿಳೆಯರೂ ವಿವಿಧ ಚಟು ವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂ ಚೂಣಿಗೆ ಬರಬೇಕು ಎಂದು ಕಾಸರಗೋ ಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ವಕೀಲ ಸುಬ್ಬಯ್ಯ ರೈ ಅಭಿಪ್ರಾಯಪಟ್ಟರು.
ಬದಿಯಡ್ಕ ಬಂಟರ ಸಂಘದ ನೇತೃತ್ವದಲ್ಲಿ ಬದಿಯಡ್ಕ ನವಜೀವನ ಶಾಲಾ ಸಭಾಂಗಣದಲ್ಲಿ ಜರಗಿದ ಬಂಟೆರೆ ಆಟಿದ ಕೂಟ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸಿದ್ದರು. ದಯಾನಂದ ರೈ ಕಳುವಾಜೆ ಬಂಟ ಸಮಾಜದಲ್ಲಿ ಆಟಿ ತಿಂಗಳ ವಿಶೇಷತೆ ಎಂಬ ವಿಷಯದಲ್ಲಿ ಉಪನ್ಯಾಸವನ್ನು ನೀಡಿದರು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಜಿಲ್ಲಾ ಉಪಾಧ್ಯಕ್ಷೆ ಶ್ಯಾಮಲ ಶೆಟ್ಟಿ ಕಾಸರಗೋಡು, ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಪ್ರಧಾನ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಮಾಜಿ ಬ್ಲಾಕ್ ಪಂಚಾಯತ್ ಸದಸ್ಯ ರಮಾನಾಥ ರೈ ಮೇಗಿನಕಡಾರು, ಕುಂಬಳೆ ಫಿರ್ಕಾ ಬಂಟರ ಸಂಘದ ಜಂಟಿ ಕಾರ್ಯದರ್ಶಿಗಳಾದ ಗಿರೀಶ್ ರೈ ವಳಮಲೆ, ರವೀಂದ್ರನಾಥ ಶೆಟ್ಟಿ ವಳಮಲೆ, ಬದಿಯಡ್ಕ ಬಂಟರ ಸಂಘದ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಗುತ್ತಿಗೆದಾರ ನವೀನ್ ಶೆಟ್ಟಿ ಬೇಳ ಉಪಸ್ಥಿತರಿದ್ದರು.
ಆಟಿದಕೂಟ ಕಾರ್ಯಕ್ರಮದ ಅಂಗವಾಗಿ ಸಮಾಜದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು. ಭಜನೆ, ರಸಪ್ರಶ್ನೆ ಮೊದಲಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪೆರಡಾಲ ಸೇವಾ ಸಹಕಾರಿ ಬೇಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಅವಿನಾಶ್ ರೈ, ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜೂನಿಯರ್ ವಿಭಾಗದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮೈತ್ರಿ ರೈಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶ್ರದ್ಧಾ ರೈ, ಕೃತಿ ರೈ ಪ್ರಾರ್ಥನೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕೋಶಾಧಿಕಾರಿ ದಯಾನಂದ ರೈ ಕಡಾರು ವಂದಿಸಿ, ಶಿಕ್ಷಕಿ ಅಶ್ವಿನಿ ಪ್ರದೀಪ್ ಶೆಟ್ಟಿ ಬೇಳ ನಿರೂಪಿಸಿದರು.
ಮಧೂರು: ಬಂಟರ ಸಂಘ ಮಧೂರು ಸಮಿತಿಯ ವತಿಯಿಂದ ಅಟಿದ ಕೂಟ ಮಧೂರಿನ ಸಮೀಪದ ಪರಕ್ಕಿಲದಲ್ಲಿರುವ ಸಂಘದ ಕಾರ್ಯಾಲಯ ಭವನದಲ್ಲಿ ನಡೆಯಿತು. ಬಂಟ ಮಹಿಳಾ ಸಮಿತಿ ವತಿಯಿಂದ ಜರಗಿದ ಕಾರ್ಯಕ್ರಮದಲ್ಲಿ ಸುಮಾರು 25 ಕ್ಕೂ ಮಿಕ್ಕಿ ವಿವಿಧ ತಿಂಡಿ ತಿನಸುಗಳನ್ನು ತಯಾರಿಸಲಾಗಿತು. ಕೂಡ್ಲು, ಮಧೂರು, ಮಾಯಿಪ್ಪಾಡಿ ಸಿರಿಬಾಗಿಲು ಗಳ ಮಹಿಳೆಯರು ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದ್ದರು. ಲೀಲಾವತಿ ಟೀಚರ್ ದೀಪ ಬೆಳಗಿಸಿ ಉದ್ಘಾಟಿಸಿದರು ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಹಿರಿಯ ವಕೀಲರು ಹಾಗೂ ದ. ಕ. ಜಿಲ್ಲಾ ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಕಾಸರಗೋಡು ವಲಯ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚಿಕ್ಕಾಡು, ಬಾಬು ರೈ ಗಂಗೆ, ಅಶೋಕ್ ರೈ ಸೂರ್ಲು ಮಾತನಾಡಿದರು.
ಮಹಿಳಾ ಸಮಿತಿಯ ಶ್ಯಾಮಲಾ ಎಂ. ಶೆಟ್ಟಿ ಕುದ್ರೆಪ್ಪಾಡಿ ಸ್ವಾಗತಿಸಿ ದರು. ಮಹಿಳಾ ಸಮಿತಿಯ ಗೌರವ ಅಧ್ಯಕ್ಷೆ ನಾಟಿ ವೈದ್ಯೆ ಯಮುನಾ ಶೆಟ್ಟಿ ಉಪಸ್ಥಿರಿದ್ದರು. ರೋಹಿತಾಕ್ಷಿ ಬಿ ರೈ ಟೀಚರ್ ನಿರೂಪಿಸಿ, ಜಯಲಕ್ಷ್ಮಿ ಅಡಪ ವಂದಿಸಿದರು.