ಬಂಟ್ವಾಳದಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಚೆಂಗಳ ನಿವಾಸಿ ಸೆರೆ
ಕಾಸರಗೋಡು: ಬಂಟ್ವಾಳ ಬಿ ಸಿ ರೋಡ್ನಲ್ಲಿ ಅಂಗಡಿಗಳಲ್ಲಿ ಖೋಟಾನೋಟು ಚಲಾವಣೆ ನಡೆಸಲು ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಚೆಂಗಳ ನಿವಾಸಿ ಸೆರೆಯಾಗಿದ್ದಾನೆ. ಶೆರೀಫ್ ಎಂಬಾತನನ್ನು ವಿದ್ಯಾನಗರದಿಂದ ಬಂಟ್ವಾಳ ಪೊಲೀಸರು ಸೆರೆಹಿಡಿದಿದ್ದಾರೆ. 2024 ಮೇ 10ರಂದು ಕಾಸರಗೋಡು ಸೂರ್ಲು ನಿವಾಸಿ ಸಿ.ಎ. ಮುಹಮ್ಮದ್, ಪತ್ನಿ ಖಮರುನ್ನಿಸ ಎಂಬಿವರನ್ನು ಖೋಟಾನೋಟು ಸಹಿತ ಬಂಟ್ವಾಳದಿAದ ಪೊಲೀಸರು ಸೆರೆ ಹಿಡಿದಿದ್ದರು. ಈ ಘಟನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯಾಗಿ ದ್ದಾನೆ ಶೆರೀಫ್. ದಂಪತಿಗಳಿAದ ಅಂದು 500 ರೂ.ಗಳ 46 ಖೋಟಾ ನೋಟುಗಳನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಕಸ್ಟಡಿಗೆ ಲಭಿಸಿದಾಗ ಪೊಲೀಸರು ನಡೆಸಿದ ತನಿಖೆಯಲ್ಲಿ ಕಾಸರಗೋಡು ಜಿಲ್ಲೆಯಿಂದ 500 ರೂ.ಗಳ 460 ಖೋಟಾನೋಟುಗಳನ್ನು ಪತ್ತೆಹಚ್ಚಲಾಗಿತ್ತು. ಕಾರುಗಳಲ್ಲಿ ತಲುಪಿ ಅಂಗಡಿಗಳಿAದ ಸಾಮಾನು ಖರೀದಿಸಿ 500 ರೂ.ಗಳ ಖೋಟಾ ನೋಟುಗಳನ್ನು ನೀಡಿ ಚಿಲ್ಲರೆ ಪಡೆಯುವುದು ತಂಡದ ಕೆಲಸವಾಗಿದೆ. 100 ರೂ.ಗಿಂತಲೂ ಕಡಿಮೆ ಮೌಲ್ಯದ ಸಾಮಗ್ರಿಗಳನ್ನು ಪಡೆದು 500 ರೂ. ನೋಟು ನೀಡಿ ವಂಚಿಸಲಾಗುತ್ತಿತ್ತು. ಶಂಕೆ ತೋರಿದ ಅಂಗಡಿ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ನಡೆಸಿದ ತನಿಖೆಯಲ್ಲಿ ದಂಪತಿಯನ್ನು ಈ ಮೊದಲು ಸೆರೆ ಹಿಡಿಯಲಾಗಿತ್ತು. ಆ ತಂಡದಿAದ ತಲೆಮರೆಸಿಕೊಂಡಿದ್ದ ಆರೋಪಿ ಈಗ ಸೆರೆಯಾಗಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.