ಬಂದ್ಯೋಡಿನ ಯುವತಿ ಆತ್ಮಹತ್ಯೆ ಪ್ರಕರಣ: ಪೊಲೀಸ್ ತನಿಖೆ ಆರಂಭ ತಂದೆಯ ಸಹೋದರನಿಗೆ ಫೋನ್ನಲ್ಲಿ ಬೆದರಿಕೆ-ದೂರು
ಕುಂಬಳೆ: ಬಂದ್ಯೋಡು ಅಡ್ಕ ಒಳಯ ರೋಡ್ನ ದಿ| ಮೂಸ ಎಂಬವರ ಪುತ್ರಿ ಆಯಿಶತ್ ರಿಯಾನ (24)ರ ಸಾವಿಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೂರು ದಿನಗಳ ಹಿಂದೆ ಮನೆಯ ಬಾತ್ರೂಂನಲ್ಲಿ ತಲೆಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆಯಿಶತ್ ರಿಯಾನ ಪತ್ತೆಯಾಗಿದ್ದರು. ಶಾಲು ಬಳಸಿ ನೇಣು ಬಿಗಿದು ಆತ್ಮಹತ್ಯೆಗೈಯ್ಯಲು ಯತ್ನಿಸಿದಾಗ ಶಾಲು ತುಂಡಾಗಿ ಕೆಳಗೆ ಬಿದ್ದು ತಲೆ ಗೋಡೆಗೆ ಬಡಿದು ಆಯಿಶತ್ ರಿಯಾನರಿಗೆ ಗಂಭೀರ ಗಾಯಗಳಾಗಿರುವುದಾಗಿ ಸಂಬಂಧಿಕರು ಪೊಲೀಸರಲ್ಲಿ ತಿಳಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಆಯಿಶತ್ ರಿಯಾನ ಗುರುವಾರ ಮುಂಜಾನೆ ಮೃತಪಟ್ಟಿದ್ದರು. ಕಾನೂನು ಕ್ರಮಗಳ ಬಳಿಕ ಮೃತದೇಹವನ್ನು ಅಂದು ಸಂಜೆ ಅಡ್ಕ ಮುಬಾರಕ್ ಮಸೀದಿ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೂರೂವರೆ ವರ್ಷಗಳ ಹಿಂದೆ ಆಯಿಶತ್ ರಿಯಾನ ಹಾಗೂ ಮಂಜೇಶ್ವರ ಬಟ್ಯಪದವು ನಿವಾಸಿಯಾದ ಬಶೀರ್ರ ಮದುವೆ ನಡೆದಿತ್ತು. ಈ ಸಂಬಂಧದಲ್ಲಿ ಎರಡೂವರೆ ವರ್ಷದ ಒಂದು ಗಂಡು ಮಗುವಿದೆ. ಆಯಿಶತ್ ರಿಯಾನ ಎರಡು ವರ್ಷಗಳಿಂದ ತಾಯಿ ಮನೆಯಲ್ಲಿದ್ದರು. ಇದೇ ವೇಳೆ ಪತ್ನಿ ಹಾಗೂ ಮಗುವಿಗೆ ವಾಸ ಸೌಕರ್ಯ ಒದಗಿಸಲು ಬಶೀರ್ ಮುಂದಾಗಿರಲಿಲ್ಲ. ಒಂದು ವಾರ ಹಿಂದೆ ಆಯಿಶತ್ ರಿಯಾನ ಬಟ್ಯಪದವಿಗೆ ತಲುಪಿ ಪತಿಯನ್ನು ಭೇಟಿಯಾಗಿ ತನಗೆ ಹಾಗೂ ಮಗುವಿಗೆ ನಿಮ್ಮೊಂದಿಗೆ ವಾಸಿಸಲು ಸೌಕರ್ಯ ಏರ್ಪಡಿಸಬೇಕೆಂದು ಆಗ್ರಪಟ್ಟಿದ್ದರೆನ್ನಲಾಗಿದೆ. ಆದರೆ ಆ ಬೇಡಿಕೆಯನ್ನು ಪತಿ ನಿರಾಕರಿಸಿರುವುದೇ ಆಯಿಶತ್ ರಿಯಾನ ಆತ್ಮಹತ್ಯೆಗೆ ಕಾರಣ ಎಂದು ಆಕೆಯ ತಂದೆಯ ಸಹೋದರ ಮೆಹಮೂದ್ ಅಡ್ಕ ತಿಳಿಸಿದ್ದಾರೆ. ಇದರ ಹೆಸರಲ್ಲಿ ಬಶೀರ್ ತನಗೆ ಫೋನ್ ಕರೆ ಮಾಡಿ ಬೆದರಿಕೆ ಯೊಡ್ಡಿರುವು ದಾಗಿಯೂ ಮೆಹಮೂ ದ್ ದೂರಿ ದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿರುವು ದಾಗಿಯೂ ಅವರು ತಿಳಿಸಿದ್ದಾರೆ.
ಯುವತಿಯ ಸಾವಿಗೆ ಸಂಬಂಧಿಸಿ ಕುಂಬಳೆ ಪೊಲೀಸರು ನಿನ್ನೆ ಆಕೆಯ ತಾಯಿಮನೆಗೆ ತೆರಳಿ ತಾಯಿ ಹಾಗೂ ಸಹೋದರಿಯರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಯುವತಿ ಆತ್ಮಹತ್ಯೆಗೆತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಬಶೀರ್ ಮಂಜೇಶ್ವರ ಠಾಣೆಗೆ ತಲುಪಿ ನನ್ನ ಪತ್ನಿಯನ್ನು ಎರಡು ವರ್ಷಗಳಿಂದ ಆಕೆಯ ತಾಯಿಮನೆಯವರು ಹಿಡಿದಿಟ್ಟಿದ್ದಾರೆಂದು ದೂರಿದ್ದಾರೆಂದು ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಬಶೀರ್ರಿಂದ ಹೇಳಿಕೆ ದಾಖಲಿಸುವಂಗವಾಗಿ ಇಂದು ಕುಂಬಳೆ ಠಾಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.