ಬಜಕೂಡ್ಲು ಶ್ರೀ ಧೂಮಾವತೀ ದೈವಸ್ಥಾನ ಮಹಾದ್ವಾರ ಲೋಕಾರ್ಪಣೆ
ಪರ‍್ಲ:ದೇವಸ್ಥಾನ-ದೈವಸ್ಥಾನದ ಮಹಾದ್ವಾರಗಳು ಪಾವಿತ್ರö್ಯದ ಸಂಕೇತ ಹಾಗೂ ಮನದ ಕಲ್ಮಷ ತೊಡೆದು ಹಾಕುವ ಹಾದಿಯಾಗಿದೆ ಎಂಬುದಾಗಿ ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.
ಪರ‍್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನಿಹದ ಶ್ರೀ ಧೂಮಾವತೀ ಹಾಗೂ ಪರಿವಾರ ದೈವಸ್ಥಾನದ ಎದುರು ನರ‍್ಮಿಸಲಾದ ನೂತನ ಮಹಾದ್ವಾರದ ಲೋಕರ‍್ಪಣೆ ಕರ‍್ಯಕ್ರಮದಲ್ಲಿ ಅವರು ಧರ‍್ಮಿಕ ಭಾಷಣ ಮಾಡಿದರು. ರಾಮ, ಕೃಷ್ಣರು ನಮಗೆ ಆರ‍್ಶಪ್ರಾಯರಾಗಿದ್ದು, ರಾಮಾಯಣದಂತಹ ಪುರಾಣ ಕತೆಗಳ ಬಗ್ಗೆ ಮಕ್ಕಳಿಗೆ ಬೋಧನೆ ನೀಡಬೇಕು ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಹಾದ್ವಾರ ಲೋಕರ‍್ಪಣೆಗೈದು ಆಶರ‍್ವಚನ ನೀಡಿ, ಆರಾಧನೆಯಲ್ಲಿ ಎಂದಿಗೂ ಆಡಂಬರ ಸಲ್ಲದು. ದೇವಾಲಯಗಳ ಪಾವಿತ್ರö್ಯತೆ ಉಳಿಸಿ, ಮೌಲ್ಯಾಧಾರಿತ ಶ್ರದ್ಧೆ-ಭಕ್ತಿಯಿಂದ ಮುನ್ನಡೆಯಬೇಕು ಎಂದು ತಿಳಿಸಿದರು. ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನ ಸಮಿತಿ ಅಧಕ್ಷ ರಾಮಕೃಷ್ಣ ಭಟ್ ರ‍್ಪಂಗಳ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಮುನ್ನಾಡ್ ವಡಕ್ಕೇಕರ ಶ್ರೀ ಭಗವತೀ ದೇವಸ್ಥಾನ ಸಮಿತಿ ಅಧ್ಯಕ್ಷ ಕುಂಞÂಕೃಷ್ಣನ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದರು. ಈ ಸಂರ‍್ಭ ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನ ಸಮಿತಿ ವತಿಯಿಂದ ಆಯೋಜಿಸಲಾದ ರಾಮಾಯಣ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದೈವಚಾಕರಿ ದಾರರು, ಮಹಾದ್ವಾರ ನರ‍್ಮಾಣ ಕರ‍್ಯದಲ್ಲಿ ಸಹಕರಿಸಿದವರನ್ನು ಅಭಿನಂದಿಸಲಾಯಿತು. ದಾಮೋದರ ಬಜಕೂಡ್ಲು ಸ್ವಾಗತಿಸಿದರು. ಉದಯ ಕುಮಾರ್ ಸ್ರ‍್ಗ ನಿರೂಪಿಸಿದರು. ಸುಜಿತ್ ಬಜಕೂಡ್ಲು ವಂದಿಸಿದರು.
ಸಾಂಸ್ಕೃತಿಕ ಕರ‍್ಯಕ್ರಮದ ಅಂಗವಾಗಿ ಯಕ್ಷಗಾನ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ನರ‍್ದೇಶನದಲ್ಲಿ ವಾಂತಿಚ್ಚಾಲ್ ಕುಂಟಾಲುಮೂಲೆ ಚಿರಂಜೀವಿ ಮಹಿಳಾ ಯಕ್ಷಕುಣಿತ ಭಜನಾ ಸಂಘದಿಂದ ಯಕ್ಷ ಕುಣಿತ ಭಜನೆ ನಡೆಯಿತು.