ಬಜಿಲಾಡಿಯಲ್ಲಿ ಗುಡ್ಡೆ ಕುಸಿತ: ಹಲವು ಕುಟುಂಬಗಳ ಸ್ಥಳಾಂತರ; ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ಭೇಟಿ
ಮಂಜೇಶ್ವರ: ಗುಡ್ಡೆ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಊರವರನ್ನು ಭಯ ಭೀತರನ್ನಾಗಿಸಿದ ಘಟನೆ ನಡೆದಿದೆ. ವರ್ಕಾಡಿ ಪಂಚಾಯತ್ ವ್ಯಾಪ್ತಿಯ7ನೇ ವಾರ್ಡ್ ಬಾಕ್ರಬೈಲ್ ಬಳಿಯ ಕಜೆ ಸಮೀಪದ ಬಜಿಲಾಡಿಗುಡ್ಡೆ ಪ್ರದೇಶದ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಇದರಿಂದ ಕೆಳಗಡೆಯಲ್ಲಿರುವ ಹಲವಾರು ಮನೆಗಳು ಭೀತಿಯಲ್ಲಿದೆ. 2ಫೀಟ್ ಭೂಮಿ ಕುಸಿದು ಹೋಗಿದ್ದು, ಭಾರೀ ಗಾತ್ರದಲ್ಲಿ ಬಿರುಕು ಬಿಟ್ಟು ಆತಂಕದ ವಾತಾವರಣ ಉಂಟಾಗಿದೆ. ಗುಡ್ಡೆ ಪ್ರದೇಶ ಹಾಗೂ ಕೆಳಭಾಗದಲ್ಲಿ ವಾಸವಾಗಿರುವ 6 ಕುಟುಂಬಗಳನ್ನು ಶನಿವಾರ ಸ್ಥಳಾಂತರಿಸಲಾಗಿದೆ. ಇದೇ ಪರಿಸರದಲ್ಲಿರುವ ಗುಡ್ಡೆ ಇನ್ನೂ ಕುಸಿಯುವ ಭೀತಿಯಲ್ಲಿದೆ. ಘಟನೆ ಸ್ಥಳಕ್ಕೆ ನಿನ್ನೆಜಿಲ್ಲಾಧಿಕಾರಿ ಕೆ. ಇಂಬಶೇಖರ್, ಶಾಸಕ ಎ.ಕೆ.ಎಂ ಅಶ್ರಫ್, ತಶೀಲ್ದಾರ್ ಶಿಬು.ಪಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಮಂಜೇಶ್ವರ ಠಾಣಾಧಿಕಾರಿ ರಾಜೀವ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು, ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ.ಎಸ್, ಕಾರ್ಯದರ್ಶಿ ಜಿ.ಅನಿಲ್ ಕುಮಾರ್, ಪಂಚಾಯತ್ ಮಾಜಿ ಅಧ್ಯಕ್ಷ ಪಿ.ಬಿ ಅಬೂಬಕ್ಕರ್ ಪಾತೂರು, ಪಂಚಾಯತ್ ಸದಸ್ಯ ಉಮ್ಮರ್ ಬೋರ್ಕಳ, ಕೊಡ್ಲಮೊಗರು ಗ್ರಾಮಾಧಿಕಾರಿ ಕಿರಣ್ ಶೆಟ್ಟಿ , ಜಿಯೋಲಾಜಿಸ್ಟ್ಗಳಾದ ವಿಜಯ್, ಅಶ್ವತಿ, ಮಂಜೇಶ್ವರ ತಾಲೂಕು ಕಚೇರಿ ಸಿಬ್ಬಂದಿ ನೌಷಾದ್.ಎಸ್, ಹಾಗೂ ರಾಜಕೀಯ, ಸಾಮಾಜಿಕ ಮುಂ ದಾಳುಗಳು, ಊರವರು ಉಪಸ್ಥಿ ತರಿದ್ದರು. ಅಲ್ಲದೆ ಕತ್ತರಿಕೋಡಿಯ ಲ್ಲಿಯೂ ಗುಡ್ಡೆ ಜರಿದು ಬಿದ್ದಿದೆ. ಈ ಪ್ರದೇಶಕ್ಕೂಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದೆ.