ಬಟ್ಟಿಪದವು ಫ್ಲೈವುಡ್ ಕಾರ್ಖಾನೆಯಲ್ಲಿ ಅಗ್ನಿ ದುರಂತ: ಭಾರೀ ನಷ್ಟ
ಮಂಜೇಶ್ವರ: ಮಂಜೇಶ್ವರ ಬಟ್ಟಿಪದವಿನಲ್ಲಿ ಕಾರ್ಯಾಚರಿಸು ತ್ತಿರುವ ಎಂ.ಎಫ್ ಫ್ರೇಮ್ ವರ್ಕ್ ಕಾರ್ಖಾನೆಯಲ್ಲಿ ಶನಿವಾರ ರಾತ್ರಿ 7 ಗಂಟೆಯ ಸುಮಾರಿಗೆ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಇದರ ಪರಿಣಾಮ ಕಾರ್ಖಾನೆ ಬಹುತೇಕ ಹೊತ್ತಿ ಉರಿದು, ಸಾಮಗ್ರಿಗಳು ನಾಶಗೊಂಡಿವೆ.
ಮಾಹಿತಿ ತಿಳಿದು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ನಿವಾಸಿಗಳಾದ ಎ.ಕೆ. ನಿಯಾಸ್ ಹಾಗೂ ಅನಿಲ್ ಕುಮಾರ್‌ರ ಮಾಲಕತ್ವದಲ್ಲಿರುವ ಕಾರ್ಖಾನೆ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಸುಮಾರು 7 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಅಗ್ನಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಹೇಳಲಾ ಗುತ್ತಿದ್ದರೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.