ಬಡಗಿ ನಿಧನ
ಪೈವಳಿಕೆ: ಬಾಯಾರು ವಿಲ್ಲೇಜ್ ಕಚೇರಿ ಸಮೀಪದ ನಿವಾಸಿ ಬಡಗಿ ಲಕ್ಷ್ಮಣ ಆಚಾರ್ಯ (69) ನಿಧನ ಹೊಂದಿದರು. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದರು. ಶ್ರೀ ವಿಶ್ವಕರ್ಮ ಸಮಾಜಸೇವಾ ಸಂಘ ಬಾಯಾರ್‌ಪದವು ಇದರ ಮಾಜಿ ಗೌರವಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಶಿಲ್ಪ, ಗಿರೀಶ, ಅಳಿಯ ಸುರೇಶ್ ಪುತ್ತೂರು, ಸೊಸೆ ಮೈತ್ರಿ, ಸಹೋದರ ಯೋಗೇಂದ್ರ ಆಚಾರ್ಯ, ಸಹೋದರಿಯರಾದ ಸುಮತಿ, ಪುಷ್ಪ, ವೇದಾವತಿ, ಪಾರ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಓರ್ವ ಸಹೋದರ ಗೋಪಾಲಕೃಷ್ಣ ಆಚಾರ್ಯ ಈ ಹಿಂದೆ ನಿಧನ ಹೊಂದಿದ್ದಾರೆ. ನಿಧನಕ್ಕೆ ಬಾಯಾರುಪದವು ಶ್ರೀ ವಿಶ್ವಕರ್ಮ ಸಮಾಜಸೇವಾ ಸಂಘ, ಮಹಿಳಾ ಸಂಘ ಸಂತಾಪ ಸೂಚಿಸಿದೆ.