ಬಡ್ಸ್ ಶಾಲಾ ಕಲೋತ್ಸವ ನಾಳೆ
ಕಾಸರಗೋಡು: ಜಿಲ್ಲೆಯ ವಿಕಲಚೇತನ ವಿದ್ಯಾರ್ಥಿಗಳ ಕಲೆ ಮತ್ತು ಸಾಹಿತ್ಯಕ್ಕೆ ಉತ್ತೇಜನ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಜಿಲ್ಲಾ ಮಟ್ಟದ ಬಡ್ಸ್ ಶಾಲಾ ಕಲೋತ್ಸವ ತಿಲ್ಲಾನಂ ನಾಳೆ ಪಡನ್ನಕ್ಕಾಡ್ ನೆಹರು ಕಾಲೇಜಿನಲ್ಲಿ ನಡೆಯಲಿದೆ. ವೇದಿಕೆ, ವೇದಿಕೇತರ ಸ್ಪರ್ಧೆಗಳು ಸೇರಿದಂತೆ 15 ಕಾರ್ಯ ಕ್ರಮಗಳಲ್ಲಿ 160 ಕಲಾ ಪ್ರತಿಭೆಗಳು ತಮ್ಮ ಪ್ರದರ್ಶನ ನೀಡುವರು.ಖ್ಯಾತ ಚಿತ್ರನಟ ಪಿ.ಪಿ.ಕುರ‍್ದಿಕೃಷ್ಣನ್ ಮಾ ಸ್ತರ್ ಉದ್ಘಾಟಿಸುವರು. ಸಮಾ ರೋಪ ಸಮಾರಂಭವನ್ನು ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸು ವರು. ಸಿದ್ಧತೆ ಪೂರ್ತಿಗೊಂಡಿದೆ ಎಂದು ಜಿಲ್ಲಾ ಮಿಷನ್ ಸಂಯೋಜಕ ತಿಳಿಸಿದ್ದಾರೆ.