ಬಡ ಕುಟುಂಬದ ಸುಜಾತರ ಚಿಕಿತ್ಸೆಗೆ ಸಹಾಯ ಯಾಚನೆ
ಮುಳ್ಳೇರಿಯ: ಲ್ಯುಕೀಮಿಯ ರೋಗ ತಗಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿರುವ ಬಡ ಯುವತಿಯ ಚಿಕಿತ್ಸೆಗಾಗಿ ಉದಾರ ದಾನಿಗಳ ಸಹಾಯ ವಿನಂತಿಸಲಾಗಿದೆ. ಕಾರಡ್ಕ ಮುಂಡೋಳುಮೂಲೆಯ ನಿವಾಸಿ ನಳಿನಿ ಎಂಬವರ ಪುತ್ರಿ ಸುಜಾತರ ಚಿಕಿತ್ಸೆಗಾಗಿ ಸಹಾಯ ಯಾಚನೆ ನಡೆಸಲಾಗಿದೆ. ರೋಗ ತಗಲಿದ ಸುಜಾತ ಮೂರು ವರ್ಷಗಳಿಂದ ಚಿಕಿತ್ಸೆಯಲ್ಲಿದ್ದು, ಈಗ ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್ನಲ್ಲಿ ನಡೆಸಿದ ತಪಾಸಣೆಯಲ್ಲಿ ಮಜ್ಜಕ್ಕೆ ಕ್ಯಾನ್ಸರ್ ತಗಲಿದೆಯೆಂದು ಪತ್ತೆಹಚ್ಚಲಾಗಿದೆ. ಮಜ್ಜ ಬದಲಿಸಿಡುವುದೇ ಇದಕ್ಕೆ ಪರಿಹಾರ ಮಾರ್ಗವಾಗಿದ್ದು, ಇದಕ್ಕೆ ಭಾರೀ ಮೊತ್ತವ್ಯಯವಾಗಲಿದೆ. ಕೂಲಿ ಕಾರ್ಮಿಕನಾದ ಪತಿ ಇದುವರೆಗೆ ತನ್ನಿಂದಾಗುವಷ್ಟು ಚಿಕಿತ್ಸೆ ನೀಡಿದ್ದು, ಇವರಿಗೆ ಸಣ್ಣಪ್ರಾಯದ ಇಬ್ಬರು ಮಕ್ಕಳಿದ್ದಾರೆ. ಕುಟುಂಬಕ್ಕೆ ಸಹಾಯ ಮಾಡಲು ಇಚ್ಛಿಸುವವರು 9207627991 ಎಂಬ ಗೂಗಲ್ ಪೇ ನಂಬರ್ಗೆ ಮೊತ್ತ ಪಾವತಿಸಬಹುದಾ ಗಿದೆ. ಹೆಚ್ಚಿನ ಮಾಹಿತಿ 8606834519 ರಿಂದ ಲಭಿಸುವುದು.