ಬದಿಯಡ್ಕದಲ್ಲಿ ಎರಡು ಅಬಕಾರಿ ಕಾರ್ಯಾಚರಣೆ: ಮದ್ಯ ವಶ; ಬೈಕ್ ಸಹಿತ ಇಬ್ಬರ ಸೆರೆ
ಬದಿಯಡ್ಕ:ಬದಿಯಡ್ಕ ಎಕ್ಸೈಸ್ ರೇಂಜ್‌ನ ಅಬಕಾರಿ ತಂಡ ಬದಿಯಡ್ಕ ಮೂಕಂಪಾರೆ ಮತ್ತು ಚೆನ್ನಾರ್‌ಕಟ್ಟೆ ಎಂಬೆಡೆಗಳಲ್ಲಾಗಿ ನಿನ್ನೆ ನಡೆಸಿದ ಎರಡು ಕಾರ್ಯಾಚರಣೆಗಳಲ್ಲಾಗಿ ಒಟ್ಟು 92 ಟೆಟ್ರಾ ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಮೂಕಂಪಾರೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 60 ಪ್ಯಾಕೆಟ್ (10.800 ಲೀಟರ್) ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ನೀರ್ಚಾಲ್ ಕಿನ್ನಿ ಮಾಣಿ ನಿವಾಸಿ ಮನು ಪಿ.ಎಸ್. ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾ ಗಿದೆ. ಬದಿಯಡ್ಕ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಸುಬಿನ್ ರಾಜ್ ಕೆ. ಇವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಚೆನ್ನಾರ್‌ಕಟ್ಟೆಯಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ 32 ಟೆಟ್ರಾ ಪ್ಯಾಕೆಟ್ (5.76 ಲೀಟರ್) ಕರ್ನಾ ಟಕ ನಿರ್ಮಿತ ಮದ್ಯ ವಶಪಡಿ ಸಲಾ ಗಿದೆ. ಇದನ್ನು ಸಾಗಿಸಲು ಬಳಸ ಲಾದ ಬೈಕ್‌ನ್ನೂ ಅಬಕಾರಿ ತಂಡ ವಶ ಪಡಿಸಿ ಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂ ಬ್ಡಾಜೆ ಕಳಯತ್ತೋಡಿಯ ಹೇಮಚಂದ್ರ ಕೆ. ಎಂಬಾತನನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಬದಿಯಡ್ಕ ಎಕ್ಸೈಸ್ ರೇಂಜ್‌ನ ಪ್ರಿವೆಂಟಿವ್ ಆಫೀಸರ್ ಮಂಜುನಾಥ ಆಳ್ವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿಗಳನ್ನು ನಂತರ ನ್ಯಾಯಾಲ ಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.