ಬದಿಯಡ್ಕದಲ್ಲಿ ರಾಮ ರೈ ಸಂಸ್ಮರಣೆ
ಬದಿಯಡ್ಕ: ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಆಶ್ರಯದಲ್ಲಿ ಮಾಜಿ ಲೋಕಸಭಾ ಸದಸ್ಯ ದಿ| ಐ ರಾಮರೈಯವರ ಸಂಸ್ಮರಣೆ ಬದಿಯಡ್ಕ, ಮಂಡಲ ಕಚೇರಿಯಲ್ಲಿ ನಡೆಯಿತು. ಹಿರಿಯ ಮುಖಂಡ ಪಿ.ಜಿ. ಚಂದ್ರಹಾಸ ರೈ ಪುಷ್ಪಾರ್ಚನೆ ನಡೆಸಿದರು. ಮಂಡಲ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು.
ಮುಖಂಡರಾದ ನಾರಾಯಣ ಮಣಿಯಾಣಿ, ನೀರ್ಚಾಲು, ಜಗನ್ನಾಥ ರೈ ಪೆರಡಾಲಗುತ್ತು, ತಿರುಪತಿ, ಖಾದರ್ ಮಾನ್ಯ, ಕುಮಾರ್ ಭಟ್, ಸೂಪಿ, ಲೋಹಿಕುಟ್ಟಿಮೂಲೆ, ಶಾಫಿ ಗೋಳಿಯಡ್ಕ, ವಾಮನ ಚುಕ್ಕಿನಡ್ಕ, ರಾಮ ಗೋಳಿಯಡ್ಕ, ಸತೀಶ್ ಜೇನಿ, ಬಲತೀಶ್ ದರ್ಭೆತ್ತಡ್ಕ ಉಪಸ್ಥಿತರಿದ್ದರು.