ಬದಿಯಡ್ಕದ ಹಿರಿಯ ವೈದ್ಯ ಡಾ| ಎಸ್.ಎಸ್.ಭಟ್ ನಿಧನ
ಬದಿಯಡ್ಕ: ಹಿರಿಯ ವೈದ್ಯ, ಸಾಮಾಜಿಕ, ಧಾರ್ಮಿಕ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿದ್ದ ಡಾ| ಎಸ್.ಎಸ್. ಭಟ್ (೯೦) (ಶ್ಯಾಮ್ ಭಟ್) ನಿಧನರಾದರು. ಸರ್ಪಂಗಳ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದ ಅವರು ಕೆಲವು ವರ್ಷಗಳಿಂದ ಪುತ್ತೂರು ಮುಕ್ವೆ ಎಂಬಲ್ಲಿ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಬದಿಯಡ್ಕದಲ್ಲಿ ಸುಮಾರು ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಿಂದಿನ ಕಾಲದಲ್ಲಿ ವಾಹನ ಸೌಕರ್ಯ ವಿಲ್ಲದ ಮನೆ ಮನೆಗೂ ಕಾಲ್ನಡಿಗೆಯಲ್ಲೇ ತೆರಳಿ ಅವರು ಹೆರಿಗೆ ಮಾಡಿಸುವುದರಲ್ಲಿ ನುರಿತರಾಗಿದ್ದರು. ಬಡವರಿಗೆ ಉಚಿತವಾಗಿಯೇ ಔಷಧಿಯನ್ನು ನೀಡುತ್ತಿದ್ದರು. ಬದಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲಿ ಕೆಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ತೊಡಗಿ ಸಿಕೊಂಡಿದ್ದ ಅವರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿ ಯವಾಗಿ ಭಾಗವಹಿಸುತ್ತಿದ್ದರು.
ಮೃತರು ಪತ್ನಿ ಭಾರತಿ, ಮಕ್ಕಳಾದ ಕೇಶವಚಂದ್ರ, ಡಾ| ರಾಮಮೋಹನ, ಡಾ| ಅರವಿಂದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಡಾ| ಕೃಷ್ಣಮೂರ್ತಿ ಈ ಹಿಂದೆ ನಿಧನಹೊಂದಿದ್ದಾರೆ.