ಬದಿಯಡ್ಕ ಪೇಟೆಯಲ್ಲಿ ನಾಯಿಗಳ ವಾಸ ರಸ್ತೆಯಲ್ಲಿ…!
ಬದಿಯಡ್ಕ: ಪೇಟೆಯ ರಸ್ತೆಗಳಲ್ಲಿ ನಾಯಿಗಳ ಹಿಂಡು ಸಮಸ್ಯೆ ಉಂಟುಮಾಡುತ್ತಿದೆ. ಬದಿಯಡ್ಕ ಪೇಟೆಯ ಸರ್ಕಲ್ನಲ್ಲಿ ನಿನ್ನೆ ರಾತ್ರಿ ನಾಯಿಗಳು ತಂಡತಂಡವಾಗಿ ಸಂಚರಿಸುವ ದೃಶ್ಯ ಕಂಡುಬಂದಿದೆ. ರಸ್ತೆಯಲ್ಲಿ ವಾಹನಗಳು ಸಾಗುವಾಗ ಇವು ಅತ್ತಿತ್ತ ಓಡುವುದರಿಂದಾಗಿ ವಾಹನ ಚಾಲಕರಿಗೆ ಅದರಲ್ಲೂ ದ್ವಿಚಕ್ರ ಸವಾರರಿಗೆ ಭಾರೀ ಸಂ ಕಷ್ಟವಾಗುತ್ತಿದೆ. ಕೆಲವೊಮ್ಮೆ ನಿಯಂತ್ರಣ ತಪ್ಪಿ ಬಿದ್ದು ಅಪಾಯ ಸಂಭವಿಸುವಸಾಧ್ಯತೆಯೂ ಇದೆ. ಪೇಟೆಯಲ್ಲಿ ರಾತ್ರಿ ಹಗಲೆನ್ನದೆ ನಾಯಿಗಳ ಹಿಂಡು ರಸ್ತೆಯಲ್ಲೇ ಬೀಡುಬಿಡುತ್ತಿರುವುದು ಸಾರ್ವ ಜನಿಕರಿಗೂ, ನಡೆದುಕೊಂಡು ಹೋಗುವವರಿಗೂ ಸಮಸ್ಯೆ ತಂದಿ ತ್ತಿದೆ. ನಾಯಿಗಳ ಕಾಟ ತಪ್ಪಿಸಲು ಕ್ರಮ ಉಂಟಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.