ಬದಿಯಡ್ಕ ಪೊಲೀಸರಿಂದ ರಾಜ್ಯವೇ ತಲೆತಗ್ಗಿಸುವಂತಾಗಿದೆ- ಶ್ಯಾಮ್ ಮೋಹನ್
ಬದಿಯಡ್ಕ: ಸಾಮಾಜಿಕ ಕಳಿ ಕಳಿಯ ಬೇಡಿಕೆಯೊಂದಿಗೆ ಸಂಘ ಪರಿವಾರ ಪ್ರತಿಭಟನೆ ನಡೆಸುತ್ತಿದೆ. ಪೊಲೀಸ್ ಇಲಾಖೆ ತಮ್ಮ ಜವಾ ಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಹಿಂದೂ ಸಮಾಜದ ಪ್ರತಿಭಟನೆಗೆ ಕಾರಣ ವಾಗಿದೆ. ಪೊಲೀಸ್ ಎಂದರೆ ಎಲ್ಲರಿಗೂ ಒಂದೇ ರೀತಿಯಲ್ಲಿರ ಬೇಕೇ ಹೊರತು ಇಲ್ಲಿ ಜಾತಿ ಮತ ರಾಜಕೀಯವನ್ನು ತೋರಿಸುವಂತಿಲ್ಲ. ಕೇರಳದಲ್ಲಿ ಅತ್ಯುತ್ತಮವಾದ ಪೊಲೀಸ್ ಇಲಾಖೆಯಿತ್ತು. ಆದರೆ ಇಂದು ಇಲ್ಲಿನ ಅಧಿಕಾರಿಗಳ ಕಾರ್ಯವು ಕೇರಳ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ ಎಂದು ಹಿಂದೂ ಐಕ್ಯವೇದಿ ಕೇರಳ ರಾಜ್ಯ ಕಾರ್ಯದರ್ಶಿ ಶ್ಯಾಮ್ ಮೋಹನ್ ಹೇಳಿದರು.
ಲವ್ಜಿಹಾದಿಗೆ ಬೆಂಬಲ ನೀಡಿದ ಬದಿಯಡ್ಕ ಠಾಣೆಯ ಪೊಲೀಸ್ ಅದಿsಕಾರಿಗಳ ಹಿಂದೂ ವಿರೋದಿs ನೀತಿ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಬದಿಯಡ್ಕ ಪೊಲೀಸ್ ಠಾಣೆಗೆ ಶನಿವಾರ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು. ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಸುವ ಹುನ್ನಾರಕ್ಕೆ ನೇತೃತ್ವವನ್ನು ನೀಡುತ್ತಿರುವ ಪೋಪುಲರ್ ಫ್ರಂಟ್, ಎಸ್.ಡಿ.ಪಿ.ಐ. ಮೊದಲಾದ ಸಂಘಟನೆಯು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿರುವುದು ನಾಡಿನಾದ್ಯಂತ ತಿಳಿದ ವಿಚಾರವಾಗಿದೆ. ಪೊಲೀಸ್ ಇಲಾಖೆ ಇಂತಹ ಘಟನೆಗಳು ನಡೆಯದಂತೆ ತಡೆಯುವ ಬದಲು ಲವ್ಜಿಹಾದ್ನಂತಹ ಘಟನೆಗಳಿಗೆ, ಮತಾಂತರಕ್ಕೆ ಬೆಂಬಲವನ್ನು ನೀಡುತ್ತಿರುವುದು ಖಂಡನೀಯ ಎಂದರು.
ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆಯನ್ನು ವಹಿಸಿ ಓರ್ವ ಉದ್ಯೋಗಸ್ಥನ ವಿರುದ್ಧ ಇದೇ ಮೊದಲ ಬಾರಿಗೆ ಬದಿಯಡ್ಕದಲ್ಲಿ ಸಂಘಪರಿವಾರದ ನೇತೃತ್ವದಲ್ಲಿ ಒಂದು ಪ್ರತಿಭಟನೆ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಇಲ್ಲಿ ಅಧಿಕಾರ ವಹಿಸಿಕೊಂಟ ಅದಿsಕಾರಿಯು ಹಿಂದೂ ಹುಡುಗಿಯ ಮತಾಂತರಕ್ಕೆ ಬೆಂಬಲವಾಗಿ ನಿಂತಿರುವುದು ಖಂಡನೀಯವಾಗಿದೆ ಎಂದರು. ಬದಿಯಡ್ಕ ಗಣೇಶ ಮಂದಿರದಿAದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.