ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಸಭೆ
ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಮಂಡಲ ಕಚೇರಿಯಲ್ಲಿ ನಡೆಯಿತು. ಡಿಸಿಸಿ ಅಧ್ಯಕ್ಷ ಫೈಸಲ್ ಉದ್ಘಾಟಿಸಿದರು. ಅವರು ಮಾತನಾಡಿ, ತ್ರಿಸ್ತರ ಪಂಚಾಯತ್ ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ಕರೆ ನೀಡಿದರು. ಎಂ.ಸಿ. ಪ್ರಭಾಕರನ್, ವಾಸುದೇವನ್ ನಾಯರ್ ಮಾತನಾಡಿದರು. ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಚಂದ್ರಹಾಸ ರೈ, ನಾರಾಯಣ ನೀರ್ಚಾಲು, ಖಾದರ್ ಮಾನ್ಯ, ಗಂಗಾಧರ ಗೋಳಿಯಡ್ಕ, ಕೃಷ್ಣದಾಸ್, ಬಲ್ತೀಸ್ ಕ್ರಾಸ್ತಾ, ಶಾಫಿ ಗೋಳಿಯಡ್ಕ, ಚಂದ್ರಹಾಸ, ನಿರಂಜನ ರೈ ಪೆರಡಾಲ, ಕುಮಾರ ನಾಯರ್, ರಾಮ ಪಟ್ಟಾಜೆ, ವಾಮನ ಚುಕ್ಕಿನಡ್ಕ, ರವಿ ಕುಂಟಾಲುಮೂಲೆ, ನಾರಾಯಣ ಭಂಡಾರಿ, ರಾಮ ಗೋಳಿಯಡ್ಕ, ಸತೀಶ್ ಜೋನಿ, ಕೇಶವ, ಮೊಹಮ್ಮದ್, ಬಾಬು ಪಟ್ಟಾಜೆ, ಶರೀಫ್ ಬಿರ್ಮಿನಡ್ಕ, ಮಂಜುನಾಥ ಚುಕ್ಕಿನಡ್ಕ, ಜಗನ್ನಾಥ ರೈ ಭಾಗವಹಿಸಿದರು.