ಬದಿಯಡ್ಕ ಹೋಮಿಯೋ ಡಿಸ್ಪೆನ್ಸರಿ ಕಟ್ಟಡದ ಸೀಲಿಂಗ್ ಕುಸಿತ:ಅದೃಷ್ಟವಶಾತ್ ತಪ್ಪಿದ ಅಪಾಯ

ಬದಿಯಡ್ಕ: ಬದಿಯಡ್ಕದಲ್ಲಿರುವ ಹೋಮಿಯೋ ಡಿಸ್ಪೆನ್ಸರಿ ಕಟ್ಟಡದ ಸೀಲಿಂಗ್ ಕುಸಿದುಬಿದ್ದಿದ್ದು ಅಲ್ಲಿದ್ದ ವೈದ್ಯರು ಹಾಗೂ ರೋಗಿಗಳಲ್ಲಿ ಆತಂಕಕ್ಕೆ ಕಾರಣವಾಯಿತು. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದೆ. ಘಟನೆ ವೇಳೆ ವೈದ್ಯರು ಸಿಬ್ಬಂದಿಗಳು ಹಾಗೂ ಕೆಲವು  ಮಂದಿ ರೋಗಿಗಳು ಅಲ್ಲಿದ್ದರು. ಆದರೆ ಅವರ ದೇಹದ ಮೇಲೆ ಸೀಲಿಂಗ್ ಬೀಳದಿರುವುದರಿಂದ ಅಪಾಯ ತಪ್ಪಿದೆ.

ಪಂಚಾಯತ್‌ನ ಅಧೀನದಲ್ಲಿ ಈ ಹೋಮಿಯೋ ಡಿಸ್ಪೆನ್ಸರಿ ಕಾರ್ಯಾಚರಿಸುತ್ತಿದೆ. ಪಂಚಾಯತ್ ಕಚೇರಿಯ ಸಮೀಪದಲ್ಲೇ ಕಾರ್ಯಾಚರಿಸುವ  ಈ ಆರೋಗ್ಯ ಕೇಂದ್ರದ ಕಟ್ಟಡ ಅಪಾಯ ಭೀತಿಯಲ್ಲಿರುವುದು ತಿಳಿದಿದ್ದರೂ  ಪಂಚಾಯತ್ ಆಡಳಿತ ಸಮಿತಿ ಯಾವುದೇ ಕ್ರಮ ಕೈಗೊಂಡಿಲ್ಲವೆಂಬ  ಆರೋಪ ಕೇಳಿಬಂದಿದೆ.  ಈ ಹಿಂದೆ ಅಂಗನವಾಡಿಯಾಗಿ ಕಾರ್ಯಾಚರಿಸಿದ್ದ ೫೦ ವರ್ಷಗಳಿಗೂ ಹೆಚ್ಚು ಹಳಮೆಯ ಕಟ್ಟಡದಲ್ಲಿ ಇದೀಗ ಹೋಮಿಯೋ ಡಿಸ್ಪೆನ್ಸರಿ ಕಾರ್ಯಾಚರಿಸುತ್ತಿದೆ. ಹೆಂಚು ಹಾಸಿರುವ ಕಟ್ಟಡದಲ್ಲಿ ಮಳೆ ನೀರು ಒಳಗೆ ಸೇರುತ್ತಿದೆ. ಈ ಕಟ್ಟಡ ಅಪಾಯ ಭೀತಿಯನ್ನು ಎದುರಿಸುತ್ತಿದೆಯೆಂದು ತಿಳಿಸಿ ಪಂಚಾಯತ್ ಆಡಳಿತ ಸಮಿತಿಗೆ ವೈದ್ಯರುಗಳು ಮನವಿ ಸಲ್ಲಿಸಿದ್ದರು. ಅಲ್ಲದೆ ಈ ಬಗ್ಗೆ ಎಚ್‌ಎಂಸಿ ಕಮಿಟಿಗೂ ತಿಳಿಸಲಾಗಿತ್ತು.  ಆದರೂ  ಕಟ್ಟಡದ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲವೆನ್ನಲಾಗುತ್ತಿದೆ.ಪ್ರತೀ ವರ್ಷ ಪಂಚಾಯತ್ ಆಡಳಿತ ಸಮಿತಿ ಹಣಕಾಸು ವರ್ಷದಲ್ಲಿ ಹೋಮಿಯೋ ಆಸ್ಪತ್ರೆ ಕಟ್ಟಡಕ್ಕೆ ಫಂಡ್ ಮೀಸಲಿಡುತ್ತಿದೆ. ಆದರೆ ನಿರ್ಮಾಣ ನಡೆಸುತ್ತಿಲ್ಲವೆಂದೂ ಹೇಳಲಾಗುತ್ತಿದೆ. ಅಪಾಯಭೀತಿಯೊ ಡ್ಡುತ್ತಿರುವ ಈ ಕಟ್ಟಡದಲ್ಲಿ ಭಯಭೀತಿಯಿಂದಲೇ ಕರ್ತವ್ಯ ನಿರ್ವಹಿಸಬೇಕಾಗಿ ಬರುತ್ತಿದೆಯೆಂದು  ಇಲ್ಲಿನ ವೈದ್ಯರು ತಿಳಿಸುತ್ತಿದ್ದಾರೆ.  ಈ ಬಗ್ಗೆ ಡಿಎಂಒಗೆ ಮನವಿ ನೀಡಿರುವು ದಾಗಿ ವೈದ್ಯರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

You cannot copy content of this page