ಬಳಾಲ್ ಪಂ. ಕಚೇರಿ, ಅಧ್ಯಕ್ಷನ ಮನೆಗೆ ವಿಜಿಲೆನ್ಸ್ ದಾಳಿ
ಕಾಸರಗೋಡು: ಬಳಾಲ್ ಪಂಚಾಯತ್ ಕಚೇರಿ ಹಾಗೂ ಪಂಚಾಯತ್ ಅಧ್ಯಕ್ಷನ ಮನೆಯಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸುತ್ತಿದೆ. ಕಲ್ಲಿಕೋಟೆಯಿಂದ ತಲುಪಿದ ವಿಜಿಲೆನ್ಸ್ನ ಪ್ರತ್ಯೇಕ ತಂಡ ತಪಾಸಣೆ ನಡೆಸುತ್ತಿದೆ. ಇಂದು ಮುಂಜಾನೆ 5.30ರ ವೇಳೆ ಪಂಚಾಯತ್ ಅಧ್ಯಕ್ಷ ರಾಜು ಕಟ್ಟಕ್ಕಯ ಎಂಬವರ ಮಾಲೋತ್ತ್ನ ಮನೆಗೆ ವಿಜಿಲೆನ್ಸ್ ತಂಡ ದಾಳಿ ನಡೆಸಿದೆ. ಸೊತ್ತು ಸಂಪಾ ದನೆಗೆ ಸಂಬಂಧಿಸಿದ ದೂರಿನಂತೆ ದಾಳಿ ನಡೆಸಿರುವುದಾಗಿ ಸೂಚನೆಯಿದೆ.