ಬಸ್‌ನಲ್ಲಿ ಬಾಲಕಿಗೆ ಕಿರುಕುಳ: ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸು

ಆಲಪ್ಪುಳ: ಪ್ರಾಯಪೂರ್ತಿಯಾಗದ ವಿದ್ಯಾರ್ಥಿನಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಬಸ್ ಕಂಡೆಕ್ಟರನ್ನು ಸೆರೆ ಹಿಡಿಯಲಾಗಿದೆ. ಮಣ್ಣಂಚೇರಿ ನಿವಾಸಿ ನಿಯಾಸ್ (೨೮)ನನ್ನು ಬಂಧಿಸಲಾಗಿದೆ. ಹಲವು ದಿನಗಳಿಂದ ಆರೋಪಿ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಬಹಿರಂಗಪಡಿಸಬಾರದೆಂದು ಆರೋಪಿ ಬೆದರಿಸಿರುವುದಾಗಿಯೂ ಹೇಳಲಾಗುತ್ತಿದೆ. ಬಾಲಕಿಯ ಸಂಬಂಧಿಕರು ನೀಡಿದ ದೂರಿನಂತೆ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಈತನಿಗೆ ರಿಮಾಂಡ್ ವಿಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page