ಬಸ್ಸಿನಲ್ಲಿ ಗಾಂಜಾ ಸಾಗಾಟ ಪ್ರಯಾಣಿಕ ಸೆರೆ
ಕಾಸರಗೋಡು: ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪದಂತೆ ಓರ್ವನನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಎಸ್ಐ ವಿ.ಕೆ. ಅನೀಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಪ್ರಸ್ತುತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹೊಸದುರ್ಗ ಪೂಂಜಾವಿ ಶಾಲೆ ರಸ್ತೆ ಬಳಿಯ ಅಯಿಂಙೋತ್ತ್ ಲಕ್ಷಂ ವೀಡ್ ಕಾಲನಿಯ ಕೆ.ಎಂ. ಅಶ್ರಫ್ (36)ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಸ್ ನಿನ್ನೆ ಸಂಜೆ ಕಾಸರಗೋಡಿನಿಂದ ಹೊಸದುರ್ಗಕ್ಕೆ ಹೋಗುತ್ತಿದ್ದ ವೇಳೆ ಗುಪ್ತ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಮೇಲ್ಪರಂಬ ಪೊಲೀಸ್ ಠಾಣೆ ಬಳಿ ಆ ಬಸ್ಸನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಆ ಬಸ್ಸಿನೊಳಗೆ ಬ್ಯಾಗೊಂದು ಪತ್ತೆಯಾಗಿದೆ. ಪೊಲೀ ಸರು ಅದನ್ನು ತೆರೆದು ಪರಿಶೀಲಿಸಿ ದಾಗ ಅದರಲ್ಲಿ ಬಚ್ಚಿಡಲಾಗಿದ್ದ ೮೦೦ ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಅದಕ್ಕೆ ಸಂಬಂಧಿಸಿ ಅಶ್ರಫ್ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.