ಬಸ್ಸು ತಂಗುದಾಣದಲ್ಲಿ ನಿಂತಿದ್ದ ಪ್ಲಸ್‌ಟು ವಿದ್ಯಾರ್ಥಿಗೆ ತಂಡದಿಂದ ಹಲ್ಲೆ
ಕುಂಬಳೆ: ತರಗತಿ ಮುಗಿದು ಮನೆಗೆ ತೆರಳಲು ಬಸ್ ತಂಗುದಾಣದಲ್ಲಿ ನಿಂತಿದ್ದ ಪ್ಲಸ್‌ಟು ವಿದ್ಯಾರ್ಥಿಗೆ ಮಾರಕಾಯುಧಗಳೊಂದಿಗೆ ತಲುಪಿದ ತಂಡ ಹಲ್ಲೆಗೈದು ದಾಗಿ ದೂರಲಾಗಿದೆ. ಶಿರಿಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯೂ ನೆಲ್ಲಿಕುಂಜೆ ಚೇರಂಗೈ ಕಡಪ್ಪುರ ನಿವಾಸಿ ಯಾದ ಮೊಹಮ್ಮದ್ ಆಸಿಖ್ (೧೭)ಗೆ ಹಲ್ಲೆಗೈಯ್ಯಲಾಗಿದೆ. ವಿದ್ಯಾರ್ಥಿಯನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ವಿದ್ಯಾರ್ಥಿಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಕಂಡರೆ ಪತ್ತೆಹಚ್ಚಬಹುದಾದ ಹತ್ತು ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.