ಬಸ್ಸ್‌ಗಳೆರಡು ಢಿಕ್ಕಿ: ಹಾನಿ
ಕಾಸರಗೋಡು: ಕೆಎಸ್‌ಆರ್ ಟಿಸಿ ಹಾಗೂ ಖಾಸಗಿ ಬಸ್‌ಗಳೆ ರಡು ಢಿಕ್ಕಿ ಹೊಡೆದು ಹಾನಿ ಗೊಂಡ ಘಟನೆ ಪಿಲಿಕ್ಕೋಡ್ ರಾಷ್ಟ್ರೀಯ ಹೆದ್ದಾರಿ ಮಟ್ಟಲಾ ಯಿಯಲ್ಲಿ ನಿನ್ನೆ ನಡೆದಿದೆ. ಚೆರ್ವತ್ತೂರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಅದರ ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗೆ ಹಾನಿಯುಂಟಾಗಿದ್ದು, ಆ ಬಗ್ಗೆ ನೀಡಿದ ದೂರಿನಂತೆ ಖಾಸಗಿ ಬಸ್ ಚಾಲಕನ ವಿರುದ್ಧ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.