ಬಸ್ ಮಾಲಕ ನಿಧನ
ಕಾಸರಗೋಡು: ಬಸ್ ಮಾಲಕ ಸೀತಾಂಗೋಳಿಯ ನಾರಾಯ ಣನ್ (೬೦) ನಿಧನಹೊಂದಿದರು. ಬಸ್ ಮಾಲಕರ ಸಂಘದ ತಾಲೂಕು ಸಮಿತಿ ಸದಸ್ಯರಾದ ಇವರು ಅಡೂರು-ಕಾಸರಗೋಡು ರೂಟ್ನಲ್ಲಿ ಸಂಚರಿಸುವ ದುರ್ಗಾ ಬಸ್ನ ಮಾಲಕರಾಗಿದ್ದರು. ಕೆಎಸ್ಆರ್ಟಿಸಿ ನೌಕರನೂ ಆಗಿದ್ದರು. ಮೃತರು ಪತ್ನಿ ಸುಮಲತ, ಮಕ್ಕಳಾದ ಶ್ರುತಿ, ಅಕ್ಷಯ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಾರಾಣಯನ್ರ ನಿಧನಕ್ಕೆ ಬಸ್ ಆನರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳು ಸಂತಾಪ ಸೂಚಿಸಿವೆ. ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದರು.