ಬಾಕಿ ಹಣ ಕೇಳಿದುದಕ್ಕೆ ಯುವಕನಿಗೆ ಹಲ್ಲೆ:  ಓರ್ವನ ವಿರುದ್ಧ ಕೇಸು

ಬದಿಯಡ್ಕ: ಪಕ್ಷಿಗೂಡು ನಿರ್ಮಿಸಿದ ವತಿಯಿಂದ ನೀಡಲು ಬಾಕಿಯಿದ್ದ ಹಣ ಕೇಳಿದ ಯುವಕನ ಮೇಲೆ ಹಲ್ಲೆ ನಡೆಸಿದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ನೀರ್ಚಾಲು ಶಾಂತಿಪಳ್ಳ ನಿವಾಸಿ ವಸಂತ ಕುಮಾರ್ ಪಿ (32) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಗೋಳಿಯಡ್ಕದ ಸಕೀರ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶಕೀರ್‌ಗೆ ನಾನು ಪಕ್ಷಿ ಗೂಡು ನಿರ್ಮಿಸಿಕೊಟ್ಟಿದ್ದೆನೆಂದೂ ಆತ ಆ ವತಿಯಂದ ನನಗೆ 35,000 ರೂ.  ನೀಡಲು ಬಾಕಿಯಿತ್ತು. ಅದನ್ನು ನಾನು ದ. 11ರಂದು ಬೆಳಿಗ್ಗೆ ಕೇಳಿದ್ದೆ. ಆ ದ್ವೇಷದಿಂದ ಆತ  ಕೋಳಿಯಡ್ಕದಲ್ಲಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಸಂತ ಕುಮಾರ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page