ಬಾಗಿಲಿನ ಚಿಲಕ ತೆಗೆಯಲಾಗದೆ ಕೊಠಡಿಯಲ್ಲಿ ಸಿಲುಕಿಕೊಂಡ ಮಕ್ಕಳು: ನೆರವಾದ ಅಗ್ನಿಶಾಮಕದಳ
ಉಪ್ಪಳ: ಮನೆ ಕೊಠಡಿಯ ಚಿಲಕ ತೆಗೆಯಲಾಗದೆ ಇಬ್ಬರು ಪುಟ್ಟ ಮಕ್ಕಳು ಅದರೊಳಗೆ ಸಿಲುಕಿಕೊಂಡು ಸಂಕಷ್ಟಕ್ಕೀಡಾಗಿ ಬಳಿಕ ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಅವರನ್ನು ಪಾರು ಮಾಡಿದ ಘಟನೆ ನಡೆದಿದೆ.
ಮಂಗಲ್ಪಾಡಿ ಪಂ. ವ್ಯಾಪ್ತಿಯ ಕನ್ನಟಿಪಾರೆ ಕೆ.ಕೆ. ನಗರದ ಮನೆಯೊಂ ದರಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ 12 ಗಂಟೆ ವೇಳೆ ಮನೆಯ ಇತರ ಸದಸ್ಯರು ಕೆಳ ಅಂತಸ್ತಿನಲ್ಲಿದ್ದ ವೇಳೆ ೮ ಹಾಗೂ ಒಂದೂವರೆ ವರ್ಷದ ಇಬ್ಬರು ಮಕ್ಕಳು ಮೇಲಂತಸ್ತಿನ ಕೊಠಡಿಗೆ ತೆರಳಿ ಬಾಗಿಲು ಮುಚ್ಚಿ ಚಿಲಕ ಹಾಕಿ ದ್ದಾರೆ. ಅನಂತರ ಅವರಿಗೆ ಬಾಗಿಲಿನ ಚಿಲಕ ತೆಗೆಯಲಾಗದು ದರಿಂದ ಮಕ್ಕಳು ಬೊಬ್ಬೆ ಹಾಕತೊಡಗಿದ್ದಾರೆ. ಮನೆಯವರು ಪ್ರಯತ್ನಿಸಿದರೂ ಬಾಗಿಲು ತೆಗೆಯಲಾಗದೆ ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂತು. ಕೊನೆಗೆ ಉಪ್ಪಳದ ಅಗ್ನಿಶಾಮಕದಳಕ್ಕೆ ಮನೆಯವರು ಮಾಹಿತಿ ನೀಡಿದರು. ಕೂಡಲೇ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಅನಿಲ್ ಕುಮಾರ್ ಹಾಗೂ ಸಂದೀಪ್ ನೇತೃತ್ವದ ಅಗ್ನಿಶಾ ಮಕದಳ ಸ್ಥಳಕ್ಕೆ ತೆರಳಿ ಬಾಗಿಲಿನ ಚಿಲಕ ಮುರಿದು ತೆಗೆದು ಆತಂಕ ನಿವಾರಿಸಿದರು.