ಬಾಯಾರುಪದವು- ಧರ್ಮತ್ತಡ್ಕ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲು ಸಿಪಿಎಂ ಆಗ್ರಹ
ಬಾಯಾರು: ಬಾಯಾರುಪದವು ನಿಂದ ಸಜಂಕಿಲ ಮೂಲಕ ಧರ್ಮತ್ತಡ್ಕವರೆಗೆ ಸಾಗುವ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕೆಂದು ಸಿಪಿಎಂ ಬಾಯಾರು ಲೋಕಲ್ ಸಮಿತಿ ಆಗ್ರಹಿಸಿದೆ. ಪೊಸಡಿಗುಂಪೆ ಪ್ರವಾ ಸೋಧ್ಯಮ ಕೇಂದ್ರಕ್ಕೆ ಹೋಗುವ ರಸ್ತೆ ಇದಾಗಿದ್ದರೂ ಹಲವು ವರ್ಷಗಳಿಂದ ಈ ರಸ್ತೆಯನ್ನು ದುರಸ್ತಿಗೊಳಿಸಲಿಲ್ಲ. ದಿನನಿತ್ಯ 10 ಬಸ್‌ಗಳು ಹಾಗೂ ನೂರಾರು ಮಂದಿ ವಿವಿಧ ವಾಹನಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಹಕಾರಿ ಬ್ಯಾಂಕ್, ಕುಟುಂಬಾರೋಗ್ಯ ಕೇಂದ್ರಗಳಿಗೆ ತೆರಳುವವರು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
ಸಿಪಿಎಂ ಬಾಯಾರು ಲೋಕಲ್ ಸಮಿತಿಯ ಪ್ರಯತ್ನದ ಫಲವಾಗಿ ೪.೫ ಕೋಟಿ ರೂ. ಈ ರಸ್ತೆ ಅಭಿವೃದ್ಧಿಗೆ ಮಂಜೂರು ಮಾಡಲಾಗಿದೆ. ಟೆಂಡರ್ ಕ್ರಮಗಳು ಪೂರ್ತಿಯಾಗಿದ್ದು, ಮಳೆ ಕೊನೆಗೊಂಡ ತಕ್ಷಣ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಮುಂದಾಗಬೇಕೆಂದು ಸಿಪಿಎಂ ಒತ್ತಾಯಿಸಿದೆ. ಈ ಬಗ್ಗೆ ಬಾಯಾರು ಲೋಕಲ್ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಬಳ್ಳೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.