ಬಾಯಾರುಪದವು ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ತುಂಬಿಕೊಂಡಿದ್ದ ಮಾಲಿನ್ಯ ತೆರವುಗೊಳಿಸಿ ಸಂಪೂರ್ಣ ಶುಚೀಕರಣ: ನಿಟ್ಟುಸಿರು ಬಿಟ್ಟ ಸ್ಥಳೀಯರು
ಪೈವಳಿಕೆ: ಬಾಯಾರುಪದವು ನ ಹಿತ್ತಿಲಿನಲ್ಲಿ ತುಂಬಿ ತುಳುಕುತ್ತಿದ್ದ ತ್ಯಾಜ್ಯವನ್ನು ಸ್ಥಳದ ಮಾಲಕ ತೆರವು ಗೊಳಿಸಿ ಶುಚೀಕರಣಕ್ಕೆ ಕ್ರಮಕೈಗೊಂ ಡಿದ್ದಾರೆ. ನಿನ್ನೆ ಬೆಳಿಗ್ಗೆಯಿಂದ ಸಂಜೆ ತನಕ ಸ್ಥಳದ ಮಾಲಕ ಹಾಗೂ ಸ್ಥಳಿಯ ಸಮಾಜ ಸೇವಕರ ಸಹಕಾರದಿಂದ ಹಿತ್ತಿಲಿನಲ್ಲಿ ಹರಡಿಕೊಂಡಿದ್ದ ಭಾರೀ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಚೀಕರಿಸಲಾಯಿತು. ಇದರಿಂದಾಗಿ ಪರಿಸರದ ವ್ಯಾಪಾ ರಿಗಳಿÀÄ ಹಾಗೂ ಮನೆ ಮಂದಿ ನಿಟ್ಟುಸಿರು ಬಿಡುವಂತಾ ಗಿದೆ. ಖಾಲಿ ಹಿತ್ತಿಲಿನಲ್ಲಿ ವಿವಿಧ ಕಡೆಗಳಿಂದ ತ್ಯಾಜ್ಯವನ್ನು ತಂದು ಹಾಕಿ ಅದನ್ನು ಉರಿಸುತ್ತಿರುವುದು ಸ್ಥಳೀ ಯರಲ್ಲಿ ಆತಂಕವನ್ನುAಟುಮಾಡಿತ್ತು.