ಬಾಯಿಕಟ್ಟೆಯಲ್ಲಿ ಒತ್ತೆಕೋಲ ನಾಳೆ
ಪೈವಳಿಕೆ: ಬಾಯಿಕಟ್ಟೆ ಶ್ರೀ ವಯನಾಡು ವಿಷ್ಣುಮೂರ್ತಿ ಸೇವಾ ಸಮಿತಿ ಇದರ ಆಶ್ರಯದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಾಳೆ ಬಾಯಿಕಟ್ಟೆಯಲ್ಲಿ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಮೇಲೇರಿಗೆ ಕೊಳ್ಳಿ ಸೇರಿಸುವುದು, ಸಂಜೆ 6ಕ್ಕೆ ಮೀಂಜ ಕೋರಿಕ್ಕಾರು ತರವಾಡು ಕ್ಷೇತ್ರದಿಂದ ಭಂಡಾರ ಹೊರಡುವುದು, ರಾತ್ರಿ 8ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 11.30ಕ್ಕೆ ಶ್ರೀ ದೈವದ ಕುಳಿಚ್ಚಾಟಂ, ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ರಾತ್ರಿ 1ರಿಂದ ಮಿಲ್ಲೇನಿಯಂ ಸ್ಟಾರ್ ಆರ್ಕೇಸ್ಟಾç ಮಂಗಳೂರು ಇವರಿಂದ ಸಂಗೀತ ರಸಮಂಜರಿ, 13ರಂದು ಪ್ರಾತಕಾಲ 4ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ ನಡೆಯಲಿದೆ.