ಬಾಯಿಕಟ್ಟೆಯಲ್ಲಿ ಗಾಳಿ, ಮಳೆ: ಎರಡು ಮನೆ ಹಾನಿ
ಪೈವಳಿಕೆ: ಪಂಚಾಯತ್‌ನ 17ನೇ ವಾರ್ಡ್ ಬಾಯಿಕಟ್ಟೆ ಎಂಬಲ್ಲಿ ಶಾಂಭವಿ ಕೃಷ್ಣ ಎಂಬವರ ಮನೆಯ ಮೇಲೆ ನಿನ್ನೆ ರಾತ್ರಿ ಗಾಳಿ ಮಳೆಗೆ ಮನೆಯ ಹಿಂಬದಿ ಯಲ್ಲಿದ್ದ ನುಗ್ಗೆ ಮರ ಬಿದ್ದು ಮನೆಯ ಬಚ್ಚಲುಕೋಣೆ ಮತ್ತು ಅಡುಗೆಕೋಣೆ ಹಾನಿಯಾಗಿದೆ. ಮನೆಯ ಮಾಡಿನ ಹೆಂಚು ಮತ್ತು ಶೀಟುಗಳು ನಾಶವಾಗಿದೆ. ಹತ್ತಿರದಲ್ಲಿರುವ ಹೇಮಲತಾ ಎಂಬವರ ಮನೆಯ ಹೆಂಚು ನಾಶವಾಗಿದೆ. ಸ್ಥಳಕ್ಕೆ ಪಂಚಾಯತ್ ಸದಸ್ಯರಾದ ಅಬ್ದುಲ್ಲ, ಪೈವಳಿಕೆ ವಿಲ್ಲೇಜ್ ಆಫೀಸರ್ ಮೊಯ್ದೀನ್ ಕುಂಞಿ, ವಿಲ್ಲೇಜ್ ಫೀಲ್ಡ್ ಅಸಿಸ್ಟೆಂಟ್ ಬೈಜು ಎಂಬವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.