ಬಾಲಕಿಗೆ ಕಿರುಕುಳ ಆರೋಪಿಗೆ ಅವಳಿ ಜೀವಾವಧಿ ಸಜೆ, ದಂಡ
ಹೊಸದುರ್ಗ: ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾ ಲಯ ವಿವಿಧ ಪೋಕ್ಸೋ ಕಾಯ್ದೆಗಳ ಪ್ರಕಾರ ಅವಳಿ ಜೀವಾವಧಿ ಸಜೆ ಹಾಗೂ 3.5 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚೆರ್ವತ್ತೂರು ತಿಮಿರಿ ಆಶಾರಿ ಮೂಲೆಯ ಕೆ.ವಿ. ಕುಂಞಿ ಕೃಷ್ಣನ್ (61) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ನ್ಯಾಯಾಲ ಯದ ನ್ಯಾಯಾಧೀಶ ಪಿ.ಎಂ. ಸುರೇಶ್ ಈ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಒಂದೂವರೆ ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ.
2020-2021 ವರ್ಷಗಳಲ್ಲಿ 6 ಹಾಗೂ 7ನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಚೀಮೇನಿ ಠಾಣೆಯ ಎಸ್‌ಐ ಆಗಿದ್ದ ಕೆ. ಅಜಿತ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.