ಬಾಲಕಿಯನ್ನು ಬೈಕ್‌ನಲ್ಲಿ ಕರೆದೊಯ್ದು ಸುತ್ತಾಡಿದ ಆಸ್ಪತ್ರೆ ನೌಕರನ ವಿರುದ್ಧ ಕೇಸು 

ಕಾಸರಗೋಡು: ಟ್ರೈನಿಂಗ್ ನರ್ಸಿಂಗ್ ಅಸಿಸ್ಟೆಂಟ್ ಆಗಿರುವ 17ರ ಹರೆಯದ ಬಾಲಕಿಯನ್ನು ಬೈಕ್‌ನಲ್ಲಿ  ಕರೆದೊಯ್ದು ವಿವಿಧೆಡೆ ಸುತ್ತಾಡಿದ ಆಪರೇಶನ್ ಥಿಯೇಟರ್ ನೌಕರನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಸ್ವತಃ ಕೇಸು ದಾಖಲಿಸಿ ಕೊಂಡಿದ್ದಾರೆ. ಕಾಸರಗೋ ಡಿನ ಖಾಸಗಿ ಆಸ್ಪತ್ರೆಯೊಂದರ ಆಪರೇಶನ್ ಥಿಯೇಟರ್ ನೌಕರನಾ ದ  ಮಲಪ್ಪುರಂ ನಿವಾಸಿ ಇಬಾನ್ ಮುಹಮ್ಮದ್ ಎಂಬಾತನ ವಿರುದ್ಧ  ಕೇಸು ದಾಖಲಿಸಲಾಗಿದೆ. ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಈತ ಬೈಕ್‌ನಲ್ಲಿ ಕರೆದೊಯ್ಯುತ್ತಿರುವ ಬಗ್ಗೆ ನಾಗರಿಕರು ಪೊಲೀಸರಿಗೆ ತಿಳಿಸಿದ್ದರು.

Leave a Reply

Your email address will not be published. Required fields are marked *

You cannot copy content of this page