ಬಾಲಕಿ ಮತ್ತು ಆಕೆಯ ಇಬ್ಬರು ಸಹೋದರರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ ೧೮೯ ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಏಳು ವರ್ಷದ ಬಾಲಕಿ ಹಾಗೂ ಪ್ರಾಯಪೂರ್ತಿ ಯಾಗದ ಆಕೆಯ ಇಬ್ಬರು ಸಹೋದರ ರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾದ ಸಿ. ಸುರೇಶ್ ಕುಮಾರ್ ಅವರು ಪೋಕ್ಸೋ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕಾರ ಒಟ್ಟು ೧೮೯ ವರ್ಷ ಸಜೆ ಹಾಗೂ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಳಾಲ್ ಅರಿಂಙಲ್‌ನ ಟಿ.ಜಿ. ಸುಧೀಶ್ ಅಲಿಯಾಸ್ ಪಪ್ಪು (೨೫) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾ ಗಿದೆ. ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಲ್ಲಿ ನ್ಯಾಯಾಲಯ ಆರೋಪಿಗೆ ೭೪ ವರ್ಷ ಸಜೆ ಹಾಗೂ ಇಬ್ಬರು ಸಹೋದರರಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಅನುಕ್ರಮವಾಗಿ ೯೬ ವರ್ಷ ಹಾಗೂ ೧೯ ವರ್ಷದಂತೆ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ೫೦ ವರ್ಷವಾಗಿ ಒಟ್ಟಿಗೆ ಅನುಭವಿಸಿ ದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಶಿಕ್ಷೆಯ ಹೊರತಾಗಿ ನ್ಯಾಯಾಲಯ ಆರೋಪಿಗೆ ಈ ಮೂರು ಪ್ರಕರಣಗಳಲ್ಲಾಗಿ ಒಟ್ಟು ೪.೦೫ ಲಕ್ಷ ರೂ. ಜುಲ್ಮಾನೆಯನ್ನೂ ವಿಧಿಸಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಮತ್ತು ನಾಲ್ಕು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಒಂದನೇ ತರಗತಿ ವಿದ್ಯಾರ್ಥಿನಿ ಯಾದ ಬಾಲಕಿ ಮತ್ತು ಆಕೆಯ ೧೪ ವರ್ಷಪ್ರಾಯದ ಹಿರಿಯ ಸಹೋದ ರನಿಗೆ ೨೦೨೨ರಲ್ಲೂ, ೧೨ ವರ್ಷದ ಇನ್ನೋರ್ವ ಸಹೋದರನಿಗೆ ೨೦೧೯ರಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ತಿಳಿಸಿದ್ದರು.
ಈ ಮೂವರ ಪೈಕಿ ಬಾಲಕಿಯನ್ನು ಆರೋಪಿ ಆತನ ಮನೆ ಮತ್ತು ಅಲ್ಲೇ ಪಕ್ಕದ ಅರಣ್ಯ ಹಾಗೂ ಇತರ ಸ್ಥಳಗಳಿಗೆ ಸಾಗಿಸಿ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದನೆಂದು ಕೇಸಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಆಕೆಯ ಓರ್ವಸಹೋದರನನ್ನು ಮನೆಯಲ್ಲೂ, ಇನ್ನೋರ್ವ ಸಹೋದರನನ್ನು ಆ ಪ್ರದೇಶದ ಪೊದೆಗೆ ಸಾಗಿಸಿ ಅಲ್ಲಿ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.
ವೆಳ್ಳರಿಕುಂಡ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂ ಡಿದ್ದರು. ಅಂದು ವೆಳ್ಳರಿಕುಂಡ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ರಂಜಿತ್ ರವೀಂದ್ರನ್ ಅವರು ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ. ಗಂಗಾಧರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.