ಬಾಲಗೋಕುಲ ಕುಟುಂಬ ಸಂಗಮ
ಕುಂಬಳೆ: ಮಧುರ ಬಾಲಗೋ ಕುಲ ಶ್ರೀ ನಗರ ಬಾಲಗೋಕುಲದಲ್ಲಿ ಕುಟುಂಬ ಸಂಗಮ ಇತ್ತೀಚೆಗೆ ಜರಗಿತು. ಆರ್‌ಎಸ್‌ಎಸ್ ಕಿದೂರು ಮಂಡಲ ಕಾರ್ಯವಾಹ ರೋಶನ್‌ರಾಜ್ ಕಳತ್ತೂರು ಧ್ವಜಾರೋಹಣಗೈದರು. ಮಕ್ಕಳಿಂದ ವಿವಿಧ ಕಾರ್ಯಕ್ರಮ ಜರಗಿತು.
ಕುಣಿತ ಭಜನೆ, ಆಟೋಟ ಸ್ಪರ್ಧೆ, ಸಭಾ ಕಾರ್ಯಕ್ರಮ ಜರಗಿತು. ಬಾಲಗೋಕುಲ ಕಾಸರಗೋಡು ಜಿಲ್ಲಾ ಗೌರವಾಧ್ಯಕ್ಷ ಶಂಕರನಾರಾಯಣ ಭಟ್, ಅಶೋಕ ಮಾಸ್ತರ್ ಬಾಡೂರು, ಮಹಾಲಿಂಗೇಶ್ವರ ಶರ್ಮ, ಮಧುರ ಬಾಲಗೋಕುಲ ಸಮಿತಿ ಅಧ್ಯಕ್ಷ ಕೃಷ್ಣ ಪಿಲಿಂಗುರಿ, ಬಾಲಗೋಕುಲ ತಾಲೂಕು ಅಧ್ಯಕ್ಷ ಶಂಕರ ಟೈಲರ್, ಸದಸ್ಯ ಮಧುಸೂದನ ಬಂಬ್ರಾಣ, ಮಹಿಳೆಯರು ಸಹಿತ ಹಲವರು ಉಪಸ್ಥಿತರಿದ್ದರು.