ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಮಧ್ಯೆ ಯುವಕ ಮೃತ್ಯು
ಹೊಸದುರ್ಗ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲಿರುವ ಮಧ್ಯೆ ಯುವಕ ಬಾವಿಗೆ ಬಿದ್ದು ಮೃತಪಟ್ಟರು. ಕಳ್ಳಾರ್ ಅರಿಂಗಲ್‌ನ ಸುಬ್ರಹ್ಮಣ್ಯನ್ ಎಂಬ್ರಾಂದ್ರಿಯವರ ಪುತ್ರ ಪ್ರಸಾದ್ (47) ಮೃತಪಟ್ಟವರು. ನಿನ್ನೆ ರಾತ್ರಿ ಘಟನೆ ನಡೆದಿದೆ. ಗೆಳೆಯನ ಮನೆಯ ಬಾವಿಗೆ ಬೆಕ್ಕು ಬಿದ್ದಿದೆ ಎಂಬ ಮಾಹಿತಿ ತಿಳಿದು ಪ್ರಸಾದ್ ಅಲ್ಲಿಗೆ ತಲುಪಿದ್ದರು. ಬಾವಿಗಿಳಿದು ಬೆಕ್ಕನ್ನು ರಕ್ಷಿಸಿ ಹಗ್ಗ ಹಿಡಿದು ಮೇಲೇರುತ್ತಿರುವ ಮಧ್ಯೆ ಆಯಾ ತಪ್ಪಿ ಬಿದ್ದು ದುರಂತ ಸಂಭವಿಸಿದೆ.
ಕೂಡಲೇ ಕುತ್ತಿಕ್ಕೋಲ್‌ನಿಂದ ಅಗ್ನಿಶಾಮಕ ದಳ ಹಾಗೂ ರಾಜಪುರಂ ಪೊಲೀಸರು, ಸ್ಥಳೀಯರು ಸೇರಿ ಪ್ರಸಾದ್‌ರನ್ನು ಬಾವಿ ಯಿಂದ ಮೇಲೆತ್ತಿದರಾದರೂ ಜೀವ ಉಳಿ ಸಲು ಸಾಧ್ಯವಾಗಲಿಲ್ಲ. ಮೃತರು ತಾಯಿ ಸುಮತಿ, ಸಹೋದರಿ ಸುಮಿತ್ರರನ್ನು ಅಗಲಿದ್ದಾರೆ.