ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿ ಮೇಲಕ್ಕೆ ಹತ್ತುತ್ತಿದ್ದ ವ್ಯಕ್ತಿ ಬಿದ್ದು ದಾರುಣ ಮೃತ್ಯು

ಪೆರ್ಲ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿ ಬಾವಿಯಿಂದ ಮೇಲಕ್ಕೆ ಹತ್ತುತ್ತಿ ದ್ದಾಗ ಆಯ ತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಅಡ್ಯನಡ್ಕ ಬಳಿಯ ಚವರ್ಕಾಡು ಪಾರ ಎಂಬಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಕೊಲ್ಲಂ ಕಲ್ಲುವಾದುಕ್ಕಲ್  ನಿವಾಸಿಯಾದ ಸಂತೋಷ್ ಕುಮಾರ್ (53) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಚೆವರ್ಕಾಡು ಪಾರದ ಮೊಯ್ದೀನ್ ಕುಂಞಿ ಎಂಬವರ ಬಾವಿಗೆ ನಿನ್ನೆ ಸಂಜೆ ಬೆಕ್ಕು ಬಿದ್ದಿತ್ತು. ಅದನ್ನು ಮೇಲಕ್ಕೆತ್ತಲು ರಿಂಗ್ ಕಾರ್ಮಿ ಕನಾದ ಸಂತೋಷ್ ಕುಮಾರ್‌ರ ಸಹಾಯ ಯಾಚಿಸಲಾ ಗಿತ್ತು. ಅವರು ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ್ದಾರೆ. ಬಳಿಕ ಅವರು ಹಗ್ಗ ಮೂಲಕ ಮೇಲಕ್ಕೆ ಹತ್ತುತ್ತಿದ್ದಾಗ ಅರ್ಧದಿಂದ ಆಯ ತಪ್ಪಿ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡು ಅವರು ಬಾವಿಯೊಳಗೆ ಸಿಲುಕಿಕೊಂಡಿ ದ್ದರು. ವಿಷಯ ತಿಳಿದು ಕಾಸರಗೋಡು ಹಾಗೂ ಉಪ್ಪಳದಿಂದ ತಲುಪಿದ ಅಗ್ನಿ ಶಾಮಕದಳ ಸಂತೋಷ್ ಕುಮಾರ್ ರನ್ನು ಮೇಲಕ್ಕೆತ್ತಿದ್ದು, ಅಷ್ಟರೊಳಗೆ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋ ಡು ಜನರಲ್ ಆಸ್ಪತ್ರೆಗೆ ತಲುಪಿಸಲಾ ಗಿದೆ. ಮೃತರು ತಾಯಿ ಕಮಲಮ್ಮ, ಪತ್ನಿ ಲೇS, ಮಕ್ಕಳಾದ ಶರತ್, ಶರಣ್, ಸಹೋದರರಾದ ರಘು, ಕುಮಾರ್, ಸುಭಾಷ್, ಸಹೋದರಿ ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page