ಬಾವಿಯೊಳಗೆ ರಾತ್ರಿ ಪೂರ್ತಿ ಕಳೆದ ಯುವಕ: ಅಗ್ನಿಶಾಮಕ ದಳದಿಂದ ರಕ್ಷಣೆ
ಉಪ್ಪಳ: ವ್ಯಕ್ತಿಯೋರ್ವರ ಬಾವಿಯೊಳಗೆ ರಾತ್ರಿ ಪೂರ್ತಿ ಕಳೆದ ಯುವಕನೋರ್ವನನ್ನು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ರಕ್ಷಿಸಿದ ಘಟನೆ ನಡೆದಿದೆ. ಕರ್ನಾಟಕ ಹುಬ್ಬಳ್ಳಿ ನಿವಾಸಿ ಭರತ್ (24) ನನ್ನು ರಕ್ಷಿಸಲಾಗಿದೆ. ಮುಳಿಂಜ ಶಾಲಾ ಬಳಿಯ ನಿವಾಸಿ ನಂದ ಕಿಶೋರ ಎಂಬವರ ಬಾವಿಯಲ್ಲಿ ನಿನ್ನೆ ಬೆಳಿಗ್ಗೆ ಈ ವೇಳೆ ಭರತ್ ಬಾವಿಯೊಳಗಿದ್ದರು. ಬಾವಿಯೊಳಗಿನಿಂದ ಬೊಬ್ಬೆ ಕೇಳಿದಾಗ ಮನೆಯವರು ಹಾಗೂ ಪರಿಸರದವರು ನೋಡಿದ್ದÄ, ಕೂಡಲೇ ಮನೆಯವರು ಹಗ್ಗವನ್ನು ಬಾವಿಯೊಳಗೆ ಹಾಕಿ ಮೇಲೆತ್ತಲು ಸಹಾಯ ಮಾಡಿದರೂ ಅದು ವಿಫಲಗೊಂಡಿದೆ. ಬಳಿಕ ಉಪ್ಪಳದಿಂದ ಅಗ್ನಿ ಶಾಮಕ ದಳ ಆಗಮಿಸಿ ಸಿಬ್ಬಂದಿ ಬಾವಿಗೆ ಇಳಿದು ಮೇಲೆತ್ತಿದ್ದಾರೆ. ಉಪ್ಪಳ ಪರಿಸರದಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ವ್ಯಕ್ತಿ ಮದ್ಯ ಸೇವಿಸಿ ಅಲ್ಲಿ ತೆರಳುತ್ತಿದ್ದಾಗ ಬಿದ್ದಿರಬೇಕೆಂದು ಶಂಕಿಸಲÁಗಿದೆ. ಸುಮಾರು 15 ಕೋಲು ಆಳದ ಬಾವಿಯಲ್ಲಿ 5 ಕೋಲು ನೀರು ತುಂಬಿಕೊAಡಿದೆ. ಕೈಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಅತುಲ್ ರವೀಂದ್ರ ಬಾವಿಗೆ ಇಳಿದಿದ್ದಾರೆ. ಸಂದೀಪ್, ಸಿನೋಜ್, ಪಶುಪತಿ, ಸುಕೇಶ್, ಶ್ರೀನಿತ್ ಕುಮಾರ್, ಶ್ರೀಜಿತ್ ಹಾಗೂ ಸ್ಥಳೀಯರು ನಡೆಸಿದ ಕಾರ್ಯಾ ಚರಣೆಯಲ್ಲಿ ಯುವಕನನ್ನು ಮೇಲೆತ್ತಿ ರಕ್ಷಿಸಲಾಗಿದೆ.