ಬಿಎಂಎಸ್ ಕುಂಬ್ಡಾಜೆ ಪಂಚಾಯತ್ ಕಾರ್ಮಿಕರ ಕುಟುಂಬ ಸಂಗಮ
ಅಗಲ್ಪಾಡಿ: ಭಾರತೀಯ ಮಜ್ದೂರ್ ಸಂಘ ಕುಂಬ್ಡಾಜೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಜಯನಗರ, ಕುಮುಜ್ಜಿಕಟ್ಟೆ, ಮವ್ವಾರು ಯೂನಿಟ್ಗಳ ನಿರ್ಮಾಣ ಕಾರ್ಮಿಕರ, ಕೃಷಿ ಕಾರ್ಮಿಕರ, ಟೈಲರಿಂಗ್ ಕಾರ್ಮಿಕರ, ಅಸಂಘಟಿತ ಕಾರ್ಮಿಕರ ಕುಟುಂಬ ಸಂಗಮ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.
ಬಿಎಂಎಸ್ ಕುಂಬ್ಡಾಜೆ ಪಂ. ಅಧ್ಯಕ್ಷ ನಾರಾಯಣ ಪದ್ಮಾರ್ ಅಧ್ಯಕ್ಷತೆ ವಹಿಸಿದರು. ನಿರ್ಮಾಣ ಯೂನಿಯನ್ ಜಿಲ್ಲಾಧ್ಯಕ್ಷ ಕೃಷ್ಣನ್ ಉದ್ಘಾಟಿಸಿದರು. ಆರ್.ಎಸ್.ಎಸ್ ಕುಂಬ್ಡಾಜೆ ಮಂಡಲ ಕಾರ್ಯವಾಹ್ ಕೃಷ್ಣಪ್ರಸಾದ್ ಬೌದ್ಧಿಕ್ ನೀಡಿದರು. ಬಿಎಂಎಸ್ ಮುಳ್ಳೇರಿಯ ವಲಯಾಧ್ಯಕ್ಷ ಆನಂದ ಸಿ.ಎಚ್, ಕಾರ್ಯದರ್ಶಿ ಭಾಸ್ಕರನ್ ಕುಂಟಾರು ಶುಭಕೋರಿದರು. ಈ ವೇಳೆ ನಿವೃತ್ತ ಸೈನಿಕ ಕೃಷ್ಣ ಮಣಿಯಾಣಿ ಮಲ್ಲಮೂಲೆ, ನಿವೃತ್ತ ಅರಣ್ಯ ಪಾಲಕ ಕರಿಯಪ್ಪ ಮಾರ್ಪನಡ್ಕರನ್ನು ಗೌರವಿಸಲಾಯಿತು. ಯೂನಿಟ್ ವ್ಯಾಪ್ತಿಯ ಸದಸ್ಯರ ಮಕ್ಕಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವೇದಾಂತ್ ಆರ್ ಪಿ, ಅನುಷ ಕುರುಮುಜ್ಜಿಕಟ್ಟೆ ಇವರನ್ನು ಅಭಿನಂದಿಸಲಾಯಿತು. ಅನುಷಾ ಪೊಡಿಪ್ಪಳ್ಳ, ಬಿಎಂಎಸ್ ನಿರ್ಮಾಣ ಯೂನಿಟ್ ಕುರುಮುಜ್ಜಿಕಟ್ಟೆ ಅಧ್ಯಕ್ಷ ರಾಜ್ ಕುಮಾರ್, ಟೈಲರಿಂಗ್ ಯೂನಿಟ್ ಜಯನಗರ ಅಧ್ಯಕ್ಷ ಶಿವಪ್ಪ ನಾಯ್ಕ್ ಮಾರ್ಪನಡ್ಕ, ಬಿಎಂಎಸ್ ಕುಂಬ್ಡಾಜೆ ಪಂಚಾಯತ್ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್, ಟೈಲರಿಂಗ್ ಘಟಕದ ಉಪಾಧ್ಯಕ್ಷೆ ಕಮಲಾ ಸತ್ಯಶಂಕರ ಮಾರ್ಪನಡ್ಕ ಉಪಸ್ಥಿತರಿದ್ದರು. ರವೀಂದ್ರ ಪಾವೂರು ಸ್ವಾಗತಿಸಿ, ರಾಮಕೃಷ್ಣ ಪಾಲೆಕ್ಕಾರ್ ವಂದಿಸಿದರು. ರಮೇಶ್ಕೃಷ್ಣ ಪದ್ಮಾರ್ ನಿರೂಪಿಸಿದರು.