ಬಿಕೆಎಂಯು ನೇತೃತ್ವದಲ್ಲಿ ಭತ್ತದ ಕೃಷಿ ನಾಟಿ ಉದ್ಘಾಟನೆ
ಮಂಜೇಶ್ವರ: ಕೇರಳ ರಾಜ್ಯ ಕೃಷಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ‘ನಾವು ಕೃಷಿಯ ಕಡೆಗೆ’ ಯೋಜನೆಯ ಮಂಡಲ ಮಟ್ಟದ ಉದ್ಘಾಟನೆ ಬಿಕೆಎಂಯು ಬೆಜ್ಜ ಯೂನಿಟ್ ಹಾಗೂ ಮಂಡಲ ಕಮಿಟಿಯ ಜಂಟಿ ನೇತೃತ್ವದಲ್ಲಿ ಬಂಜರು ಭೂಮಿಯಲ್ಲಿ ನೇಜಿ ನೆಡುವ ಮೂಲಕ ನಡೆಸಲಾಯಿತು.
ಬೆಜ್ಜದಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿಕೆಎಂಯು ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪಿಲ್ ಉದ್ಘಾಟಿಸಿದರು. ರಾಮಚಂದ್ರ ಬಡಾಜೆ ಉದ್ಘಾಟಿಸಿದರು. ಬಿಕೆಎಂಯು ಜಿಲ್ಲಾ ಕಾರ್ಯದರ್ಶಿ ಎಂ. ಕುಮಾರನ್, ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಬಿಕೆಎಂಯು ಮಂಡಲ ಸಮಿತಿ ಸದಸ್ಯರಾದ ಶರತ್ ಬೆಜ್ಜ, ತನಿಯಪ್ಪ ಬೆಜ್ಜ, ಸಿಪಿಐ ಬೆಜ್ಜ ಬ್ರಾಂಚ್ ಕಾರ್ಯದರ್ಶಿ ಭಾಸ್ಕರ, ಎಐವೈಎಫ್ ನೇತಾರರಾದ ಕಿಶನ್ ಹೆಗ್ಡೆ, ದೇವಿ ಪ್ರಸಾದ್, ಅಜಿತ್ ಕುಮಾರ್, ಲಕ್ಷ್ಮೀಶ, ಸಚಿನ್ ಹೆಗ್ಡೆ, ಪಕ್ಷದ ನೇತಾರರಾದ ರಘುರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುಧಾ ಹೆಗ್ಡೆ ಮೊದಲಾದವರು ನೇತೃತ್ವ ನೀಡಿದರು. ಬಿಕೆಎಂಯು ಮಂಡಲ ಕಾರ್ಯದರ್ಶಿ ಗಂಗಾಧರ ಕೊಡ್ಡೆ ಸ್ವಾಗತಿಸಿದರು.