ಬಿಜೆಪಿ ನೇತಾರನ ಮನೆಗೆ ನುಗ್ಗಿ ಅಬಕಾರಿ ಅಧಿಕಾರಿಗಳಿಂದ ವ್ಯಾಪಕ ಹಾನಿ: ಬಿಜೆಪಿಯಿಂದ ಅಬಕಾರಿ ಕಚೇರಿಗೆ ಮಾರ್ಚ್
ಕುಂಬಳೆ: ಬಿಜೆಪಿ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಕುಮಾರ್‌ರ ಮನೆಗೆ ಶನಿವಾರ ರಾತ್ರಿ11 ಗಂಟೆಗೆ ದಿಢೀರ್ ದಾಳಿ ನಡೆಸಿ ವ್ಯಾಪಕ ಹಾನಿಯುಂಟುಮಾಡಿದ ಅಬಕಾರಿ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಶಾಂತಿಪಳ್ಳದಲ್ಲಿ ರುವ ಅಬಕಾರಿ ಕಚೇರಿಗೆ ಬೃಹತ್ ಪ್ರತಿಭಟನಾ ಮಾರ್ಚ್ ನಡೆಸಲಾ ಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ, ಮನೆಗೆ ಅತಿಕ್ರಮಿಸಿ ನುಗ್ಗಿ ಮನೆ ಮಂದಿ ಮೇಲೆ ಬಲಪ್ರಯೋಗಿಸಿ ಗೃಹೋಪಕರಣ ಗಳನ್ನು ನಾಶಗೊಳಿಸಿದ ಅಬಕಾರಿ ಅಧಿಕಾರಿಗಳ ಕ್ರಮ ಖಂಡನೀಯವಾ ದುದಾಗಿದೆ. ಈ ಕೃತ್ಯವೆಸಗಿದ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಸತೀಶ್ಚಂದ್ರ ಭಂಡಾರಿ ಕೋಳಾರು, ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಮೊದಲಾದವರು ಮಾತನಾಡಿದರು. ನೇತಾರರಾದ ರಾಧಾಕೃಷ್ಣ ರೈ ಮಡ್ವ, ಮುರಳೀಧರ ಯಾದವ್, ವಸಂತ ಕುಮಾರ್ ಮಯ್ಯ, ಪ್ರೇಮಲತಾ ಎಸ್, ಕೆ. ಸುಧಾಕರ ಕಾಮತ್, ಕೆ. ಮಧುಸೂದನ ಕಾಮತ್ ಸಹಿತ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದರು. ಯುವಮೋರ್ಛಾ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್ ಸ್ವಾಗತಿಸಿ, ಕುಂಬಳೆ ಪಂಚಾಯತ್ ಸದಸ್ಯ ಮೋಹನ ಕೆ. ಬಂಬ್ರಾಣ ವಂದಿಸಿದರು.