ಬಿಜೆಪಿ ಪಾಳಯಕ್ಕೆ ಸೇರಿದ ಜೆ.ಡಿ (ಎಸ್) ಎಡರಂಗದಲ್ಲಿ ಮುಂದುವರಿಯುವಂತಿಲ್ಲ-ಸಿಪಿಎಂ ಮುನ್ನೆಚ್ಚರಿಕೆ
ತಿರುವನಂತಪುರ: ಎಚ್.ಡಿ. ದೇವೇಗೌಡ ಸಾರಥ್ಯದ ಜೆಡಿ(ಎಸ್) ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ದಲ್ಲಿ ಸೇರ್ಪಡೆಗೊಂಡಿರುವ ಹಿನ್ನೆಲೆ ಯಲ್ಲಿ ಆ ಪಕ್ಷದ ಕೇರಳ ಘಟಕ ಕೇರಳ ದಲ್ಲಿ ಎಡರಂಗದ ಘಟಕ ಪಕ್ಷವಾಗಿ ಇನ್ನು ಮುಂದುವರಿಯುವಂತಿಲ್ಲವೆಂದು ಸಿಪಿಎಂ ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ತುರ್ತಾಗಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕಾಗಿದೆಯೆಂಬ ನಿರ್ದೇ ಶವನ್ನು ಜೆಡಿಎಸ್‌ನ ಕೇರಳ ಘಟಕಕ್ಕೆ ಸಿಪಿಎಂ ನೀಡಿದೆ.
ಕೇರಳದಲ್ಲಿ ಈಗ ಎನ್‌ಡಿಎ-ಎಡರಂಗ ಮೈತ್ರಿ ಕೂಟ ಆಳುತ್ತಿದೆ ಎಂದು ಯುಡಿಎಫ್ ಆರೋಪಿಸಿ ರಂಗಕ್ಕಿಳಿದಿದ್ದು ಅದರಿಂದಾಗಿ ಸಿಪಿಎಂ ಜೆಡಿಎಸ್‌ಗೆ ಈ ತುರ್ತು ನಿರ್ದೇಶ ನೀಡಿದೆ. ಜೆಡಿಎಸ್‌ನ ಕೇಂದ್ರ ನೇತೃತ್ವ ಎನ್‌ಡಿಎಗೆ ಸೇರಿದ್ದರೂ ಕೇರಳ ಘಟಕ ಅದರ ಭಾಗವಾಗದೆ ಎಡರಂಗದ ಭಾಗವಾಗಿ ಇನ್ನೂ ಮುಂದುವರಿಯಲಿ ದೆಯೆಂದು ಆ ಪಕ್ಷದ ಕೇರಳ ಘಟಕ ಅಧ್ಯಕ್ಷ ಮ್ಯಾಥು ಟಿ ಥೋಮಸ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಆ ನಿಲುವನ್ನು ಅವರು ಎಡರಂಗಕ್ಕೆ ಇನ್ನೂ ತಿಳಿಸಿಲ್ಲ.
ಎಡರಂಗ ಸಚಿವ ಸಂಪುಟದಲ್ಲ್ಲೂ ಜೆಡಿಎಸ್ ಸ್ಥಾನ ಈಗ ಹೊಂದಿದ್ದು, ಸಿಪಿಎಂ ಈಗ ತಳೆದಿರುವ ನಿಲುವಿನಿಂ ದಾಗಿ ಜೆಡಿಎಸ್‌ಗೆ ಆ ಸ್ಥಾನ ನಷ್ಟವಾಗ ಲಿದೆ. ಆದ್ದರಿಂದ ಜೆಡಿಎಸ್‌ನ ಕೇರಳ ಘಟಕ ಆ ಪಕ್ಷದ ಕೇಂದ್ರ ಘಟಕದ ಸಖ್ಯ ತ್ಯಜಿಸಿ ಕೇರಳದಲ್ಲಿ ತನ್ನದೇ ಆದ ಪಕ್ಷ ರೂಪೀಕರಿದಲ್ಲಿ ಮಾತ್ರವೇ ಆ ಪಕ್ಷಕ್ಕೆ ಎಡರಂಗದಲ್ಲಿ ಇನ್ನೂ ಮುಂದುವರಿಯಲು ಸಾಧ್ಯವಾಗಲಿದೆ.